ADVERTISEMENT

ಅರಣ್ಯ ನಾಶವಾದರೆ ದೇಶಕ್ಕೆ ಅಪಾಯ: ಪೂವಯ್ಯ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 8:20 IST
Last Updated 8 ಅಕ್ಟೋಬರ್ 2012, 8:20 IST

ಎಚ್.ಡಿ.ಕೋಟೆ: ಪರಿಸರ ಸಮತೋಲನಕ್ಕಾಗಿ ಒಂದು ದೇಶಕ್ಕೆ ಅದರ ಶೇ. 33 ಭಾಗ ಅರಣ್ಯ ಪ್ರದೇಶ ಇರಬೇಕು. ಆದರೆ, ನಮ್ಮ ದೇಶದಲ್ಲಿ ಕೇವಲ ಶೇ. 12ರಷ್ಟು ಅರಣ್ಯವಿದ್ದು ಇದನ್ನಾದರೂ ಉಳಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ದೇಶದ ಭವಿಷ್ಯ ಅಪಾಯಕ್ಕೆ ಸಿಲುಕಲಿದೆ ಎಂದು ಅಂತರಸಂತೆ ವಲಯ ಅರಣ್ಯಾಧಿಕಾರಿ ಎ.ಟಿ. ಪೂವಯ್ಯ ಎಚ್ಚರಿಸಿದರು.

ತಾಲ್ಲೂಕಿನ ಅಂತರಸಂತೆ ವ್ಯಾಪ್ತಿಯ ಸುಂಕದಕಟ್ಟೆ ಗ್ರಾಮದಲ್ಲಿ `ವನ್ಯಜೀವಿ ಸಾಪ್ತಾಹ~ದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಕಾಡಂಚಿನ ಗ್ರಾಮಗಳಲ್ಲಿನ ಕೆಲವರು ಕಾಡು ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತಿದ್ದಾರೆ. ಇದು ಶಿಕ್ಷಾರ್ಹ ಅಪರಾಧ. ಇದನ್ನು ನಿಲ್ಲಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ಅರಣ್ಯದ ಮಹತ್ವ ಅರಿತು ಪಾಲಕರಿಗೆ ತಿಳಿಸಬೇಕು ಎಂದರು.

ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿಗಳ ಜಾಗೃತಿಗಾಗಿ ಮಕ್ಕಳಿಗಾಗಿ ಚಿತ್ರಕಲೆ ಪ್ರಬಂಧ, ರಸಪ್ರಶ್ನೆ ಹಾಗೂ ಆಶುಭಾಷಣಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಮೇಶ್ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು.

ಶಿಕ್ಷಕರಾದ ರಮೇಶ್, ನಂದೀಶ್, ಅರಣ್ಯಧಿಕಾರಿಗಳಾದ ಹೆಚ್.ಎಂ ಶಿವರಾಮು, ಜೈಕುಮಾರ್, ಅಶೋಕ್, ಮಾಧುರಿ, ಅರಣ್ಯ ರಕ್ಷಕ ಎಚ್.ಕೆ. ನರಸಿಂಹಮೂರ್ತಿ, ಅಂತರಸಂತೆ ಸರ್ಕಾರಿ ಪ್ರೌಢಶಾಲೆ, ಮಗ್ಗೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.