ADVERTISEMENT

ಒಳಚರಂಡಿ ನೀರು ಸೇರದಂತೆ ಕ್ರಮಕ್ಕೆ ಸೂಚನೆ

ಲಿಂಗಾಂಬುಧಿ ಕೆರೆಗೆ ಭೇಟಿ ನೀಡಿದ ಶಾಸಕ ಎಸ್‌.ಎ.ರಾಮದಾಸ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 5:20 IST
Last Updated 12 ಜೂನ್ 2018, 5:20 IST

ಮೈಸೂರು: ನಗರದ ಲಿಂಗಾಂಬುಧಿ ಕೆರೆಗೆ ಒಳಚರಂಡಿ ನೀರು ಸೇರದಂತೆ ಕ್ರಮ ವಹಿಸುವಂತೆ ನಗರಪಾಲಿಕೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಶಾಸಕ ಎಸ್‌.ಎ.ರಾಮದಾಸ್ ಸೂಚನೆ ನೀಡಿದರು.

ಕೆರೆಯ ಆಸುಪಾಸಿನ ಒಳಚರಂಡಿ ಪೈಪುಗಳು ಒಡೆದು, ಮ್ಯಾನ್‌ಹೋಲ್‌ಗಳಿಂದ ನೀರು ಸೋರಿಕೆಯಾಗುತ್ತಿರುವ ಬಗ್ಗೆ ನಾಗರಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ರಾಮದಾಸ್ ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು. ಕೂಡಲೇ ದುರಸ್ತಿಗೊಳಿಸಿ ಕೆರೆಯ ನೀರನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ತಿಳಿಸಿದರು.

ಮಹಾಲಿಂಗೇಶ್ವರ ದೇವಸ್ಥಾನ, ಈ ಪ್ರದೇಶದ ಸುತ್ತಮುತ್ತ ಇರುವ ಸರ್ಕಾರಿ ಒತ್ತುವರಿ ಆಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ನಕ್ಷೆಯನ್ನು ಪರಿಶೀಲಿಸಿ ಒತ್ತುವರಿಗೆ ತೆರವಿಗೆ ಕ್ರಮ ವಹಿಸುವಂತೆ ಹೇಳಿದರು. ನಗರ ಪಾಲಿಕೆ, ‘ಮುಡಾ’, ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸ್ವಚ್ಛ ಪರಿಸರ ಕಾಪಾಡಲು ಶಾಶ್ವತ ಯೋಜನೆ ರೂಪಿಸಬೇಕು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.