ADVERTISEMENT

ನರ್ಸಿಂಗ್ ಹೋಮ್‌ಗಳಿಗೆ ಇಸಿಜಿ ಯಂತ್ರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 9:44 IST
Last Updated 5 ಅಕ್ಟೋಬರ್ 2017, 9:44 IST

ಮೈಸೂರು: ಕೊಲಂಬಿಯಾ ಏಷಿಯಾ ಆಸ್ಪತ್ರೆಯು ‘ಕಾರ್ಡಿಯಾಕ್ ಡಯಾಗ್ನೋಸಿಸ್ ಇನ್ ರಿಯಲ್‌ ಟೈಮ್‌’ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಹೃದಯ ಚಿಕಿತ್ಸೆಯ ಸೌಲಭ್ಯವಿರದ ನಗರದ 10 ನರ್ಸಿಂಗ್ ಹೋಮ್‌ ಗಳಿಗೆ ವಿಶೇಷ ಇಸಿಜಿ ಯಂತ್ರಗಳನ್ನು ಉಚಿತವಾಗಿ ನೀಡಲಿದೆ ಎಂದು ಆಸ್ಪತ್ರೆಯ ಹೃದ್ರೋಗ ತಜ್ಞ ಕೇಶವಮೂರ್ತಿ ಹೇಳಿದರು.

‘ಕಾರ್ಡಿಯಾಕ್ ಡಯಾಗ್ನೋಸಿಸ್ ಇನ್ ರಿಯಲ್‌ ಟೈಮ್‌ ತಂತ್ರಜ್ಞಾನದ ಮೂಲಕ ಈ ವಿಶೇಷ ಇಸಿಜಿ ಯಂತ್ರವು ಹೃದಯಿ ಸಂಬಂಧಿ ತೊಂದರೆಗಳನ್ನು ಪತ್ತೆ ಮಾಡಿ ಕ್ಷಣಾರ್ಧದಲ್ಲಿ ಪರಿಹಾರ ಸೂಚಿಸಬಲ್ಲದು. ಹೃದಯ ಆರೈಕೆಗೆ ಸಂಬಂಧಿಸಿದಂತೆ ಮುನ್ಸೂಚನೆ ನೀಡಿ ಕೊಲಂಬಿಯಾ ಆಸ್ಪತ್ರೆಯ ವೈದ್ಯರಿಗೆ ಸಂದೇಶ ರವಾನಿಸುತ್ತದೆ.

ನಂತರ ವೈದ್ಯರು ಆ ರೋಗಿಯನ್ನು ಸಂಪರ್ಕಿಸಿ ಹೆಚ್ಚಿನ ಚಿಕಿತ್ಸೆಗೆ ಸಲಹೆ ನೀಡುತ್ತಾರೆ. ತುರ್ತು ಸಂದರ್ಭಗಳಲ್ಲಿ ಹೃದ್ರೋಗ ತಜ್ಞರಿರುವ ಆಸ್ಪತ್ರೆ ತಲುಪಿ ಚಿಕಿತ್ಸೆ ಹಾಗೂ ಆರೈಕೆ ಪಡೆದುಕೊಳ್ಳಲು ಈ ತಂತ್ರಜ್ಞಾನ ನೆರವಾಗುತ್ತದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.