ADVERTISEMENT

ನೀ ಇಟ್ಟಂತೆ ಇರುವೆನು ಚಾಮುಂಡಮ್ಮ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 5:55 IST
Last Updated 11 ಅಕ್ಟೋಬರ್ 2011, 5:55 IST

ಮೈಸೂರು: ನಾಡಹಬ್ಬ ದಸರಾ ಉತ್ಸವ ಮುಗಿದರೂ ಅದರ ಕಂಪು ಮಾತ್ರ ಇನ್ನೂ ಉಳಿದಿದೆ ಎಂಬುದಕ್ಕೆ ನಗರದ ಜಗನ್ಮೋಹನ ಅರಮನೆ ಸಭಾಂಗಣ ಸೋಮವಾರ ಸಾಕ್ಷಿಯಾಯಿತು.

ಕಲಾಧಾರೆ ಕಲ್ಚರಲ್ ಟ್ರಸ್ಟ್ ಮಾಸ್ಟರ್ ಎನ್ ಬ್ಲಾಸ್ಟರ್ ಡ್ಯಾನ್ಸ್ ಗ್ರೂಪ್‌ನ ಚಾಮರಾಜ್ ಹೊರ ತಂದಿರುವ ನೀ ಇಟ್ಟಂತೆ ಇರುವೆನು ಚಾಮುಂಡಮ್ಮ ಭಕ್ತಿಗೀತೆಗಳ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ದಲ್ಲಿ ವೀರಗಾಸೆ ಕಲಾವಿದರ ನೃತ್ಯ ಆಕರ್ಷಕವಾಗಿತ್ತು. ಜಗನ್ಮೋಹನ ಸಭಾಂಗಣ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು.

ಸಿಡಿಯನ್ನು ಪತ್ರಕರ್ತ ರವೀಂದ್ರ ಭಟ್ಟ ಬಿಡುಗಡೆ ಮಾಡಿದರು. ಬಳಿಕ ಖ್ಯಾತ ನೃತ್ಯ ನಿರ್ದೇಶಕಿ ಕೃಪಾ ಫಡ್ಕೆ ತಂಡದವರು ಆಕರ್ಷಕ ನೃತ್ಯ ರೂಪಕವನ್ನು ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಸಮಾಜ ಸೇವಕ ಎಸ್.ವೆಂಕಟೇಶ್ ಅವರು ಆಟೋ ಚಾಲಕರಾದ ಬಿ.ಎಂ.ಮಹೇಶ್‌ಕುಮಾರ್, ಶ್ರೀಧರ್, ಮಂಜುನಾಥ್, ರವಿಶರ್ಮಾ, ನಂಜುಂಡಸ್ವಾಮಿ, ಲೋಕೇಶ್, ಶಿವಕುಮಾರ್, ಶೇಖರ್ ಅವರನ್ನು ಸನ್ಮಾನಿಸಿದರು.

ಪರಂಪರೆ ಗೌರವಿಸಬೇಕು: ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಪ್ರೊ.ಭಾಷ್ಯಂ ಸ್ವಾಮೀಜಿ ಹಾಗೂ ಇಳೈ ಆಳ್ವಾರ್ ಸ್ವಾಮೀಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇಳೈ ಆಳ್ವಾರ್ ಸ್ವಾಮೀಜಿ, `ಪರಂಪರೆಯನ್ನು ಗೌರವಿಸುವ ಜನ ಬರಬೇಕು. ಎಲ್ಲರೂ ಪರಂಪರೆಯನ್ನು ಗೌರವಿಸಬೇಕು. ವಿದ್ಯಾವಂತರು ಮಾಡುವ ಕೆಲಸವನ್ನು ಗುರುತಿಸಬೇಕು. ಈ ನಿಟ್ಟಿನಲ್ಲಿ ಚಾಮರಾಜ್ ಮಾಡುತ್ತಿರುವ ಕೆಲಸ ಶ್ಲಾಘನೀಯ~ ಎಂದು ಹೇಳಿದರು.

`ಸಿಡಿಯನ್ನು ಎಲ್ಲರೂ ಕೊಂಡು ಉಪಯೋಗಿಸಬೇಕು. ಸಮಾಜದಲ್ಲಿ ಮತೀಯವಾದ ತೊಲಗಬೇಕು. ಜಾತಿ, ಭೇದ ಮರೆತು ಎಲ್ಲರೂ ಒಂದಾಗಿ ಬಾಳಬೇಕು~ ಎಂದು ಸಲಹೆ ನೀಡಿದರು.

ಪ್ರೊ.ಭಾಷ್ಯಂ ಸ್ವಾಮೀಜಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಚಲನಚಿತ್ರ ನಟ ನವೀನಕೃಷ್ಣ ಮಾತನಾಡಿದರು.

ಡಿ.ಎಸ್.ಆರ್.ಗಣೇಶ್, ಅಮೋಘ ವಾಹಿನಿ ಮಾಲೀಕ ಬಿಳಿಗಿರಿ ರಂಗನಾಥ್, ಪತ್ರಕರ್ತರಾದ ಶ್ರೀನಾಥ್, ವಾಸುದೇವ್ ಅಯ್ಯಂಗಾರ್, ಲತಾ ಮೋಹನ್, ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ಅಧ್ಯಕ್ಷ ಬಿ.ವಿ.ಶೇಷಾದ್ರಿ, ಗುಬ್ಬಿಗೂಡು ರಮೇಶ್, ರಘುರಾಂ, ಮಡ್ಡಿಕೆರೆ ಗೋಪಾಲ್, ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಲಿಂಗರಾಜು, ಶ್ರೀಕಂಠ ಗುಂಡಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.