ADVERTISEMENT

ಮಹಿಳಾ, ದಸರಾ ಕ್ರೀಡಾಕೂಟ, ತಂಡಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 9:10 IST
Last Updated 3 ಸೆಪ್ಟೆಂಬರ್ 2011, 9:10 IST

ಮೈಸೂರು: ಜಿಲ್ಲಾ ಪಂಚಾಯತ್ ಹಾಗೂ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕ್ರೀಡಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ 2011-12ನೇ ಸಾಲಿನ ತಾಲ್ಲೂಕು ಮಟ್ಟದ ದಸರಾ ಮತ್ತು ತಾಲ್ಲೂಕು ಮಟ್ಟದ ಪಂಚಾಯತ್ ಯುವ ಕ್ರೀಡಾ ಮತ್ತು ಖೇಲ್ ಅಭಿಯನ (ಪ್ಯೆಕಾ) ಮಹಿಳಾ ಕ್ರೀಡಾಕೂಟ ನಡೆಯಲಿವೆ.

ಪಿರಿಯಾಪಟ್ಟಣದ ಭುವನಹಳ್ಳಿ ಪ್ರೌಢಶಾಲೆಯ ಮೈದಾನದಲ್ಲಿ (ಬೆಟ್ಟದಪುರ ಹೋಬಳಿ) ಸೆ.6ರಂದು ಬೆಳಿಗ್ಗೆ 9 ಗಂಟೆಯಿಂದ ಪಿರಿಯಾಪಟ್ಟಣ ತಾಲ್ಲೂಕು ಮಟ್ಟದ ಪಂಚಾಯತ್ ಯುವ ಕ್ರೀಡಾ ಮತ್ತು ಖೇಲ್ ಅಭಿಯನ ಕ್ರೀಡಾಕೂಟ ನಡೆಸಲು ಏರ್ಪಡಿಸಲಾಗಿದೆ.

ಸೆ.7ರಂದು ಬೆಳಿಗ್ಗೆ 9 ಗಂಟೆಗೆ ಪಿರಿಯಾಪಟ್ಟಣ ತಾಲ್ಲೂಕು ಮಟ್ಟದ ದಸರಾ ಮತ್ತು ಮಹಿಳಾ ಪಂಚಾಯತ್ ಯುವ ಕ್ರೀಡಾ ಮತ್ತು ಖೇಲ್ ಅಭಿಯನ (ಪೈಕಾ) ಮಹಿಳಾ ಕ್ರೀಡಾಕೂಟವನ್ನು ಪಿರಿಯಾಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದೆ.

ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾ ಪಟುಗಳು ಮೇಲ್ಕಂಡ ದಿನಾಂಕದಂದು ಕ್ರೀಡಾಕೂಟ ನಡೆಯುವ ಸ್ಥಳದಲ್ಲಿ ಬೆಳಿಗ್ಗೆ 8.30 ಗಂಟೆಗೆ ವರದಿ ಮಾಡಿಕೊಳ್ಳುವಂತೆ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಮೈಸೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ವಾಲಿಬಾಲ್ ತರಬೇತು ದಾರ  ಅಶೋಕ್ ಅವರನ್ನು  9844123832 ಮತ್ತು ಪಿರಿಯಾಪಟ್ಟಣ ಪದವಿ ಪೂರ್ವ ಕಾಲೇಜು  ದೈಹಿಕ ಶಿಕ್ಷಕ ಮಹದೇವಪ್ಪ ಅವರನ್ನು 9448425553, 8892033195 ಮೂಲಕ ಸಂಪರ್ಕಿಸಬಹುದಾಗಿದೆ ಎಂದು  ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ಕೋರಿದ್ದಾರೆ.

ಕೆಜಿಐಡಿ ಕಚೇರಿ ಸ್ಥಳಾಂತರ
ಜಿಲ್ಲಾ ವಿಮಾ ಕಚೇರಿ ಕೆಜಿಐಡಿ ಮೈಸೂರು ಕಚೇರಿಯನ್ನು ನಂ.74, ಸಂದೇಶ್ ಭವನ, ಸಾಹುಕಾರ್ ಚೆನ್ನಯ್ಯ ರಸ್ತೆ, ಸರಸ್ವತಿಪುರಂ, ಮೈಸೂರು -9 ಇಲ್ಲಿಂದ ಸೆ.1ರಿಂದ ಜಾರಿಗೆ ಬರುವಂತೆ ನಂ.167, ಶ್ರೀ ಚರಣ, ಸಾಹುಕಾರ್ ಚೆನ್ನಯ್ಯ ರಸ್ತೆ, ಗಂಗೋತ್ರಿ ಬಡಾವಣೆ, ಮೈಸೂರು -9 (ಬ್ರಹ್ಮಸ್ಥಾನ ಕಲ್ಯಾಣ ಮಂಟಪ ಮತ್ತು ತರಳುಬಾಳು ಶಿಕ್ಷಣ ಸಂಸ್ಥೆ ಎದುರು ಕಟ್ಟಡ) ಇಲ್ಲಿಗೆ ಸ್ಥಳಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.