ಮೈಸೂರು: `ಮಾರ್ಚ್ 3ರಂದು ನಗರದಲ್ಲಿ ನಡೆಯುವ ಸರ್ಕಾರಿ ಸವಲತ್ತುಗಳ ಸಂತೆಯಲ್ಲಿ ಮಹಾನಗರ ಪಾಲಿಕೆಯು 2011-12 ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿಯಲ್ಲಿ ಫಲಾನು ಭವಿಗಳಿಗೆ ಸವಲತ್ತುಗಳನ್ನು ವಿತರಿಸ ಲಿದೆ~ ಎಂದು ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ ಬುಧವಾರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಂಗಭೂಮಿಯ 75 ಕಲಾವಿದರಿಗೆ ತಲಾ 5 ಸಾವಿರ ಪ್ರೋತ್ಸಾಹಧನ ನೀಡಲಾಗುವುದು. ಗೃಹಭಾಗ್ಯ (ಮನೆ ನಿರ್ಮಾಣ) ಯೋಜನೆಯಲ್ಲಿ ಎಸ್‌ಸಿ/ಎಸ್‌ಟಿ ಜನಾಂಗದ 425 ಫಲಾನುಭವಿಗಳಿಗೆ ಒಂದು ಮನೆ ನಿರ್ಮಿಸಿಕೊಳ್ಳಲು ರೂ.1.30 ಲಕ್ಷ ನೀಡಲಾಗುವುದು. ಸಫಾಯಿ ಕರ್ಮಚಾರಿ ಪುನರ್ವಸತಿ ನೇರ ಸಾಲ ಯೋಜನೆಯಡಿ 105 ಫಲಾನುಭವಿಗಳಿಗೆ ತಲಾ ರೂ.5 ಸಾವಿರ ಪ್ರೊತ್ಸಾಹಧನ ನೀಡಲಾಗುತ್ತಿದೆ~ ಎಂದು ಮಾಹಿತಿ ನೀಡಿದರು.
`ಆರೋಗ್ಯ ವಿಮೆ ಯೋಜನೆಯಲ್ಲಿ ಐದು ಮಂದಿ ಇರುವ ಕುಟುಂಬಕ್ಕೆ ರೂ.180 ವೆಚ್ಚವನ್ನು ಭರಿಸಲಾಗುತ್ತಿದ್ದು 13,888 ಕುಟುಂಬಗಳು ಸೌಲಭ್ಯ ಪಡೆಯ ಲಿವೆ. 39 ಪ್ರಮುಖ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಸೇರಿದಂತೆ ದೇಶದ 5570 ಟಿಟಿಕೆ ನೆಟ್‌ವರ್ಕ್ ನಲ್ಲಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಕೊಳ್ಳಬ ಹುದಾಗಿದೆ.ಎಸ್‌ಸಿ/ ಎಸ್‌ಟಿ ಮತ್ತು ಬಡಜನರಿಗೆ 690 ಸೋಲಾರ್ ದೀಪಗಳನ್ನು ವಿತರಿಸಲಾಗುವುದು. ಭಾಗ್ಯಜ್ಯೋತಿ ಯೋಜನೆ ಯಲ್ಲಿ 650 ಎಸ್‌ಸಿ/ಎಸ್‌ಟಿ ವರ್ಗದವರಿಗೆ ಒಂದು ಮನೆಗೆ 10 ಸಾವಿರ ಪ್ರೋತ್ಸಾಹಧನ ನೀಡಲಾಗು ವುದು. 1481 ಮಂದಿಗೆ ಹೊಲಿಗೆ ಯಂತ್ರ ನೀಡಿಕೆ, 40 ಕುಸ್ತಿಪಟುಗಳಿಗೆ ತಲಾ ರೂ. 5 ಸಾವಿರ ಪ್ರೋತ್ಸಾಹಧನ ವಿತರಿಸಲಾಗುವುದು~ ಎಂದು ಮಾಹಿತಿ ನೀಡಿದರು.
ಕಂಪ್ಯೂಟರ್ ವಿತರಣೆ: `ಕೈದಿಗಳು ಹೆಚ್ಚಿನ ಅಧ್ಯಯನ, ಜ್ಞಾನಾರ್ಜನೆ ಪಡೆ ದುಕೊಳ್ಳಲು ಹಾಗೂ ಸಾಮಾಜಿಕ ಪರಿವರ್ತನೆ ಹೊಂದುವ ನಿಟ್ಟಿನಲ್ಲಿ ಕಂಪ್ಯೂಟರ್ ತರಬೇತಿ ಪಡೆಯಲು ಅನುಕೂಲ ವಾಗುವಂತೆ ನಗರ ಕಾರಾ ಗೃಹಕ್ಕೆ 10 ಕಂಪ್ಯೂಟರ್‌ಗಳನ್ನು ನೀಡಲಾ ಗುತ್ತಿದೆ. ಜ್ಞಾನಸಿರಿ ಯೋಜನೆ ಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುವ ಸಾಮಾನ್ಯವರ್ಗ ಹಾಗೂ ಎಸ್‌ಸಿ/ಎಸ್‌ಟಿ ವರ್ಗದ ಪ್ರತಿಭಾವಂತರು ಹಾಗೂ ಸರ್ಕಾರಿ ಶಾಲಾ/ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿರುವ ನಗರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾ ಗುವುದು. ಸಾಮಾನ್ಯ ವರ್ಗದಲ್ಲಿ 290, ಎಸ್‌ಸಿ/ಎಸ್‌ಟಿ 129 ವಿದ್ಯಾರ್ಥಿಗಳು ಇದ್ದಾರೆ.
ನಮ್ಮ ಮನೆ: `ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆ ಯಾದ ನಮ್ಮ ಮನೆ ಮತ್ತು ವಾಜಪೇಯಿ ನಗರ ವಸತಿ ಯೋಜನೆ ಪಾಲಿಕೆಯಲ್ಲಿ ಅನುಷ್ಠಾನದಲ್ಲಿದ್ದು, ನಮ್ಮ ಮನೆ ಯೋಜನೆಯಲ್ಲಿ ಬ್ಯಾಂಕು ಗಳಿಂದ ರೂ. 50 ಸಾವಿರ ಸಾಲ ಹಾಗೂ ವಾಜಪೇಯಿ ನಗರ ವಸತಿ ಯೋಜನೆಯಡಿ ರಾಜ್ಯ ಸರ್ಕಾರದ ವತಿಯಿಂದ ರೂ.50 ಸಾವಿರ ಸಂಪೂರ್ಣ ಸಹಾಯಧನ ಮತ್ತು ಫಲಾನುಭವಿಯ ವಂತಿಕೆ ರೂ.30 ಸಾವಿರಗಳನ್ನು ನೀಡಲಾಗುತ್ತದೆ. ಕೆ.ಆರ್. ಕ್ಷೇತ್ರದ 2002-03 ನೇ ಮತ್ತು 2003-04 ನೇ ಸಾಲಿನ 1393 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ರೂ.20,100 ವಂತಿಕೆ ಹಣವನ್ನು ಪಾವತಿಸಿಕೊಂಡು ಬೀಗದ ಕೀಲಿಯನ್ನು ವಿತರಿಸಲಾ ಗುತ್ತಿದೆ~ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್ ಎಂ.ಜೆ. ರವಿಕುಮಾರ್, ಆಯುಕ್ತ ಕೆ.ಎಸ್. ರಾಯ್ಕರ್, ಉಪ ಆಯುಕ್ತ ಧರ್ಮಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.