ADVERTISEMENT

ಸ್ವಯಂ ಉದ್ಯೋಗದಿಂದ ಆರ್ಥಿಕ ವೃದ್ಧಿ: ಶಂಕರೇಗೌಡ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 5:50 IST
Last Updated 20 ಏಪ್ರಿಲ್ 2012, 5:50 IST

ಪಿರಿಯಾಪಟ್ಟಣ: ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಯಂ ವೃತ್ತಿ ಕೈಗೊಂಡು ಆರ್ಥಿಕಾಭಿವೃದ್ಧಿಯಲ್ಲಿ ಕೈಜೋಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ.ಶಂಕರೇಗೌಡ ತಿಳಿಸಿದರು.

ತಾಲ್ಲೂಕಿನ ರಾವಂದೂರು ಗ್ರಾಮ ಪಂಚಾಯಿತಿ ಲೋಕಶಿಕ್ಷಣ ಕೇಂದ್ರ ಮತ್ತು ಜೆಎಸ್‌ಎಸ್ ಜನಶಿಕ್ಷಣ ಸಂಸ್ಥೆ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಹೊಲಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅನಕ್ಷರಸ್ಥರ ಸಂಖ್ಯೆಯಲ್ಲಿ ಹೆಚ್ಚು ಮಹಿಳೆಯರು ಇದ್ದು ಅವರನ್ನು ಅಕ್ಷರಸ್ಥರನ್ನಾಗಿ ಮಾಡುವ ಜವಾಬ್ದಾರಿ ಸಂಸ್ಥೆಯ ಮೇಲಿದೆ ಎಂದರು.

ಜೆಎಸ್‌ಎಸ್ ಜನಶಿಕ್ಷಣ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಎ.ಪಿ.ರಮೇಶ್ ಮಾತನಾಡಿ ಅನಕ್ಷರಸ್ಥತೆಯಿಂದ ಅಕ್ಷರತೆಯ ಕಡೆಗೆ ಸಾಗಿದ ಮಹಿಳೆಯರು ಸ್ವಾವಲಂಬನೆಯ ಹಾದಿ ಕಂಡುಕೊಳ್ಳಬೇಕು ಎಂದರು.

ತರಬೇತಿ ಶಿಬಿರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷ ಗಂಗಾಧರ್, ಶಿಕ್ಷಕಿ ಸೌಮ್ಯ , ಗ್ರಾಮ ಪಂಚಾಯಿತಿ ಸಂಯೋಜಕ ಮುಕುಂದ, ಪುಣ್ಯ ಸೇರಿದಂತೆ ಹಲವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.