ಮೈಸೂರು: ಪೂರ್ಣ ಚೇತನ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತ ಪರಿಸರ ಉದ್ದೇಶದೊಂದಿಗೆ ನಗರದ ವಿವಿಧೆಡೆ 150 ಕೆ.ಜಿ ಪ್ಲಾಸ್ಟಿಕ್ ಸಂಗ್ರಹಿಸಿದರು.
ಶಾಲೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದರ್ಶನ್ ರಾಜ್ ಮಾತನಾಡಿ, ‘ನಗರದ ಸಂತೆಪೇಟೆ, ಶಿವರಾಂ ಪೇಟೆ, ದೇವರಾಜ ಅರಸು ರಸ್ತೆಗೆ ತೆರಳಿ ಪ‍್ಲಾಸ್ಟಿಕ್ ಸಂಗ್ರಹಿಸಲಾಗಿದೆ. ಜು.28ರಂದು ಅವನ್ನು ಬಳಸಿ ಒಂದು ಲೀಟರ್ ನೀರಿನ ಬಾಟಲ್‌ಗಳಿಂದ ಎರಡು ಗಂಟೆ ಅವಧಿಯಲ್ಲಿ 1,500 ಇಕೋ ಬ್ರಿಕ್ಸ್ (ಪರಿಸರ ಸ್ನೇಹಿ ಇಟ್ಟಿಗೆ) ತಯಾರಿಸಿ ದಾಖಲೆ ಮಾಡಲು ಸಿದ್ಧತೆ ನಡೆಸಿದ್ದೇವೆ. 10 ಸಾವಿರ ಗ್ರೋ ಬ್ಯಾಗ್‌ಗಳಲ್ಲಿ ಅರಣ್ಯ ಇಲಾಖೆ ನೀಡಿರುವ ಬೀಜಗಳನ್ನು ಬಿತ್ತಲಿದ್ದೇವೆ’ ಎಂದು ತಿಳಿಸಿದರು.
‘ಈ ಪ್ರಯತ್ನ ಕೇವಲ ದಾಖಲೆಗಷ್ಟೇ ಸೀಮಿತಗೊಳ್ಳದೆ ಒಂದು ಆಂದೋಲನ ರೂಪದಲ್ಲಿ ಮುಂದುವರೆಯಲಿದೆ. ಮುಂದಿನ ದಿನಗಳಲ್ಲಿ ನಾವು ನಮ್ಮ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ ಮಕ್ಕಳನ್ನೂ ಒಗ್ಗೂಡಿಸಿ, ಗ್ರೋ ಬ್ಯಾಗ್ ಮೂಲಕ ನಗರಕ್ಕೆ ಹಸಿರು ಹೊದಿಸುವ ಕೆಲಸವನ್ನು ಮುಂದುವರೆಸುತ್ತೇವೆ. ಸ್ವಚ್ಛ ಹಾಗೂ ಹಸಿರು ಮೈಸೂರು ನಿರ್ಮಾಣ ನಿಟ್ಟಿನಲ್ಲಿ ನಮ್ಮ ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಗಳಾಗಿಸುವುದೇ ನಮ್ಮ ಉದ್ದೇಶ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.