ADVERTISEMENT

ಇಂದಿನಿಂದ ಸ್ವಚ್ಛತಾ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2018, 6:37 IST
Last Updated 12 ಫೆಬ್ರುವರಿ 2018, 6:37 IST

ಮೈಸೂರು: ‘ಸ್ವಚ್ಛನಗರಿ’ ಸ್ಥಾನ ನಿರ್ಧರಿಸಲು ಕೈಗೊಳ್ಳುವ ಸ್ವಚ್ಛತಾ ಸಮೀಕ್ಷೆ (ಸ್ವಚ್ಛ ಸರ್ವೇಕ್ಷಣ್‌–2018) ನಗರದಲ್ಲಿ ಫೆಬ್ರುವರಿ 12ರಿಂದ 14ರ ವರೆಗೆ ನಡೆಯಲಿದೆ. ಹೈದರಾಬಾದ್‌ನ ಕಾರ್ವಿ ಡೇಟಾ ಮ್ಯಾನೇಜ್‌ಮೆಂಟ್‌ ಕಂಪನಿ ಈ ಬಾರಿಯ ಸಮೀಕ್ಷೆ ನಡೆಸಲಿದ್ದು, ಸಮೀಕ್ಷಾ ತಂಡ ಸೋಮವಾರ ನಗರಕ್ಕೆ ಬರಲಿದೆ.

ಸಮೀಕ್ಷಾ ತಂಡದ ಪ್ರತಿನಿಧಿಗಳು ಮೊದಲ ಎರಡು ದಿನ ದಾಖಲೆಗಳ ಪರಿಶೀಲನೆ ನಡೆಸಲಿದ್ದು, ಪ್ರಮುಖ ಸ್ಥಳಗಳಲ್ಲಿ ಕಸ ನಿರ್ವಹಣೆ ರೀತಿ, ಪೌರಕಾರ್ಮಿಕರ ಕಾರ್ಯ ನಿರ್ವಹಣೆ ಕುರಿತು ಮಾಹಿತಿ ಕಲೆ ಹಾಕಲಿದ್ದಾರೆ.

ಆ ಬಳಿಕ ಸಾರ್ವಜನಿಕರನ್ನು ಭೇಟಿಯಾಗಿ ಮಾಹಿತಿ ಪಡೆಯಲಿದ್ದಾರೆ. ನಗರವು ಕಳೆದ ವರ್ಷಕ್ಕಿಂತ ಈ ವರ್ಷ ಸ್ವಚ್ಛತೆಯಲ್ಲಿ ಹೇಗೆ ಉತ್ತಮವಾಗಿದೆ ಎಂಬ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ADVERTISEMENT

‘ಸ್ವಚ್ಛತಾ ಸಮೀಕ್ಷೆಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡಿದ್ದೇವೆ. ನಗರದಲ್ಲಿ ಮೂರು ದಿನ ಸಮೀಕ್ಷೆ ನಡೆಯಲಿದೆ. ಅನಿವಾರ್ಯವೆನಿಸಿದರೆ ನಾಲ್ಕನೇ ದಿನಕ್ಕೆ ಮುಂದುವರಿಯಲಿದೆ’ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು. ಮೊದಲ ಎರಡು ವರ್ಷ ‘ಸ್ವಚ್ಛನಗರಿ’ ಸ್ಥಾನ ಅಲಂಕರಿಸಿದ್ದ ಮೈಸೂರು ನಗರ ಕಳೆದ ಸಲ ಐದನೇ ಸ್ಥಾನ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.