ADVERTISEMENT

ಕರ್ನಾಟಕ ಪ್ರೀಮಿಯರ್ ಲೀಗ್‌: ಪ್ರತಿ ಸಿಕ್ಸರ್‌ಗೆ ಪ್ರತಿಯಾಗಿ 6 ಗಿಡ!

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2023, 13:13 IST
Last Updated 8 ಆಗಸ್ಟ್ 2023, 13:13 IST
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕೃಷ್ಣ, ಸುಚಿತ್‌, ಮನೋಜ್‌ ಹಾಗೂ ಕೆ.ಎಸ್‌. ಭರತ್‌ ಸಸಿಗಳನ್ನು ನೆಟ್ಟರು. ಧ್ರುವ ಪಾಟೀಲ ಇದ್ದರು
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕೃಷ್ಣ, ಸುಚಿತ್‌, ಮನೋಜ್‌ ಹಾಗೂ ಕೆ.ಎಸ್‌. ಭರತ್‌ ಸಸಿಗಳನ್ನು ನೆಟ್ಟರು. ಧ್ರುವ ಪಾಟೀಲ ಇದ್ದರು   

ಮೈಸೂರು: ಈ ಬಾರಿಯ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಮೈಸೂರು ವಾರಿಯರ್ಸ್‌ ತಂಡವು ಸಿಡಿಸುವ ಪ್ರತಿ ಸಿಕ್ಸರ್‌ಗೆ ಪ್ರತಿಯಾಗಿ ಸೊಸೈಟಿ ಫಾರ್‌ ಪ್ರೊಟೆಕ್ಷನ್‌ ಆಫ್‌ ಪ್ಲಾಂಟ್ಸ್‌ ಅಂಡ್‌ ಅನಿಮಲ್ಸ್ ಸಂಸ್ಥೆಯು 6 ಗಿಡಗಳನ್ನು ನೆಡಲಿದೆ.

ಇಂತಹದ್ದೊಂದು ಪರಿಸರಸ್ನೇಹಿ ಸಹಭಾಗಿತ್ವದ ಕಾರ್ಯಕ್ರಮದ ಅಂಗವಾಗಿ ನಗರದ ಗಂಗೋತ್ರಿ ಗ್ಲೇಡ್ಸ್‌ ಮೈದಾನದಲ್ಲಿ ಮಂಗಳವಾರ ಸಸಿ ನೆಡಲಾಯಿತು. ಮೈಸೂರು ವಾರಿಯರ್ಸ್‌ ಆಟಗಾರರಾದ ಪ್ರಸಿದ್ಧ ಕೃಷ್ಣ, ಸುಚಿತ್‌, ಮನೋಜ್‌ ಹಾಗೂ ಕೆ.ಎಸ್‌.ಭರತ್‌ ಸಸಿಗಳನ್ನು ನೆಟ್ಟರು. ‌

ಪ್ರಸಿದ್ಧ್‌ ಕೃಷ್ಣ ಮಾತನಾಡಿ, ‘ಇಂತಹದ್ದೊಂದು ಪರಿಸರ ಕಾಳಜಿ ಕಾರ್ಯಕ್ರಮ ನಿಜಕ್ಕೂ ಅಭಿನಂದನೀಯ. ಪರಿಸರ ಉಳಿಸುವ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗಬೇಕು’ ಎಂದರು.

ADVERTISEMENT

ಸೊಸೈಟಿ ಫಾರ್‌ ಪ್ರೊಟೆಕ್ಷನ್‌ ಆಫ್‌ ಪ್ಲಾಂಟ್ಸ್‌ ಅಂಡ್‌ ಅನಿಮಲ್ಸ್ ಸಂಸ್ಥಾಪಕ ಅಧ್ಯಕ್ಷ ಧ್ರುವ ಪಾಟೀಲ ಮಾತನಾಡಿ, ‘ಈ ಬಾರಿಯ ಕೆಪಿಎಲ್‌ನಲ್ಲಿ ಮೈಸೂರು ವಾರಿಯರ್ಸ್‌ನ ಪ್ರತಿ ಸಿಕ್ಸರ್‌ಗೆ ಪ್ರತಿಯಾಗಿ ನಮ್ಮ ಸಂಸ್ಥೆಯು ಆರು ಸಸಿಗಳನ್ನು ನೆಡಲಿದೆ. ವಿಜಯಪುರ ಜಿಲ್ಲೆಯ ಮಮದಾಪುರ ಬಳಿ ಈ ಸಸಿಗಳನ್ನು ನೆಡಲಾಗುವುದು. ಇದರಿಂದ ಪರಿಸರ ರಕ್ಷಣೆ ಆಗಲಿದ್ದು, ಯುವಜನರು ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.

ಸೊಸೈಟಿ ಪದಾಧಿಕಾರಿಗಳಾದ ಎಸ್‌.ಎಸ್‌. ಕಿಶನ್‌, ಶಿಹಾಬ್‌, ಮುರುಗೇಶ್ ಪಟ್ಟಣಶೆಟ್ಟಿ, ಭುವನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.