ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯಗೆ 'ಐ ಲವ್ ಯೂ' ಎಂದ ಯುವಕ: ಹರಿದಾಡಿದ ವಿಡಿಯೊ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 3:55 IST
Last Updated 14 ಅಕ್ಟೋಬರ್ 2024, 3:55 IST
   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯುವಕನೊಬ್ಬ 'ಐ ಲವ್ ಯೂ' ಎಂದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ದಸರಾ ಅಂಗವಾಗಿ ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಿಗೆ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯುಧಪೂಜೆಯ‌ ದಿನವಾದ ಶುಕ್ರವಾರ ರಾತ್ರಿ ಪ್ರವಾಸೋದ್ಯಮ ನಿಗಮದ ಅಂಬಾರಿ ಬಸ್ (ಡಬಲ್ ಡೆಕ್ಕರ್)ನಲ್ಲಿ ಸಂಚರಿಸಿ ವೀಕ್ಷಿಸಿದ್ದರು. ಅವರೊಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಸೆಸ್ಕ್ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ಮೊದಲಾದವರು ಪಾಲ್ಗೊಂಡಿದ್ದರು.

ಜನರಿಗೆ ನಮಸ್ಕರಿಸುತ್ತಾ, ಅವರತ್ತ ಕೈಬೀಸುತ್ತಾ ಹೋಗುತ್ತಿದ್ದ ಮುಖ್ಯಮಂತ್ರಿಗೆ ಸಯ್ಯಾಜಿರಾವ್ ರಸ್ತೆಯಲ್ಲಿ ಯುವಕನೊಬ್ಬ ಐ ಲವ್ ಯೂ ಎಂದು ಕೂಗಿ ಹೇಳಿದ್ದಾನೆ. ಇದರಿಂದ ಮುಖ್ಯಮಂತ್ರಿ ಖುಷಿಯಾದರು. ಸಚಿವೆಯೂ ಬಹಳ ಖುಷಿಗೊಂಡು, 'ನಿಮಗೆ ಕೇಳಿಸ್ತಾ' ಎಂದು ಪಕ್ಕದಲ್ಲಿದ್ದವರಿಗೆ ಹೇಳುತ್ತಾ ಜೋರಾಗಿ ನಕ್ಕು ಸಂಭ್ರಮಿಸಿದ್ದು ವಿಡಿಯೊದಲ್ಲಿದೆ.

ADVERTISEMENT

ಸಿದ್ದರಾಮಯ್ಯ ಅವರು ನಗರ ಪ್ರದಕ್ಷಿಣೆ ಮಾಡುವ ವೇಳೆ ಯುವಕರ ಗುಂಪುಗಳು 'ಭೀಮ' ಚಲನಚಿತ್ರದಲ್ಲಿ ಬರುವ ಡೈಲಾಗ್ 'ಜಾಲಿ ಜಾಲಿ' ಎಂದು ಕೂಗುತ್ತಾ ಹರ್ಷ ವ್ಯಕ್ತಪಡಿಸಿದ್ದು ಕೂಡ ವಿಡಿಯೊದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.