ADVERTISEMENT

ಐವರಿಗೆ ಅಭಿನವಶ್ರೀ ಪ್ರಶಸ್ತಿ ಪ್ರದಾನ

ವಿವಿಧ ಜಿಲ್ಲೆಗಳ 100ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 19:50 IST
Last Updated 22 ಸೆಪ್ಟೆಂಬರ್ 2019, 19:50 IST
ಶ್ರೀರಂಗಪಟ್ಟಣದ ರಾಮಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಅಭಿನವಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು
ಶ್ರೀರಂಗಪಟ್ಟಣದ ರಾಮಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಅಭಿನವಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು   

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ರಾಮಲಿಂಗೇಶ್ವರ ವಿದ್ಯಾ ಸಂಸ್ಥೆಯ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಅಭಿನವಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಅಂತರರಾಷ್ಟ್ರೀಯ ಪ್ಯಾರಾ ಒಲಿಂಪಿಕ್‌ ಕ್ರೀಡಾಪಟು ಎಸ್‌.ಜಿ. ರಾಘವೇಂದ್ರ, ಪರಿಸರ ರಮೇಶ್‌, ಮೈಸೂರಿನ ಪ್ರಾಧ್ಯಾಪಕಿ ಕೆ.ಎಂ. ಪುಷ್ಪಲತಾ, 20 ಕೃತಿಗಳನ್ನು ಪ್ರಕಟಿಸಿರುವ ಲೇಖಕ ಕೆ.ಎನ್‌. ಪುರುಷೋತ್ತಮ ಹಾಗೂ ಮೈಸೂರಿನ ಅಕ್ಷಯ ಆಹಾರ ಫೌಂಡೇಷನ್‌ ಸಂಸ್ಥೆಯ ಸಂಸ್ಥಾಪಕ ಎಚ್‌.ಆರ್‌. ರಾಜೇಂದ್ರ ಅವರಿಗೆ ಪ್ರಶಸ್ತಿ ನೀಡಲಾಯಿತು.

ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಜಿಲ್ಲೆಗಳ 100ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ADVERTISEMENT

ಆದಾಯ ತೆರಿಗೆ ಇಲಾಖೆ ನಿವೃತ್ತ ಆಯುಕ್ತ ಎಸ್‌.ಎನ್‌. ಸೇತುರಾಂ ಮಾತನಾಡಿ, ‘ಯಾವುದೇ ಕ್ಷೇತ್ರವಾದರೂ ಅಲ್ಲಿ ಸಹಜ ಬೆಳವಣಿಗೆ ನಡೆಯಬೇಕು. ನಿರೀಕ್ಷೆಗೆ ನಿಲುಕದ ಅಸಹಜ ಬೆಳವಣಿಗೆ ಒಳ್ಳೆಯದಲ್ಲ. ಗ್ರಾಮೀಣ ಜನ ಜೀವನದ ಜತೆ ಹಾಸು ಹೊಕ್ಕಾಗಿರುವ ಗ್ರಾಮೀಣ ಸಂಸ್ಕೃತಿ ನಶಿಸದಂತೆ ನೋಡಿಕೊಳ್ಳಬೇಕು. ನಗರೀಕರಣದ ದುಷ್ಪರಿಣಾಮಗಳು ಈಗಾಗಲೇ ದಟ್ಟ ಪರಿಣಾಮ ಬೀರುತ್ತಿದ್ದು, ಸಾಧ್ಯವಾದಷ್ಟು ಅದನ್ನು ತಡೆಯಬೇಕು. ಮಾಧ್ಯಮಗಳು ಸಮಾಜದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬಿತ್ತಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ರಾಮಲಿಂಗೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಭಾನುಪ್ರಕಾಶ್‌ ಶರ್ಮಾ, ‘ಯುವ ಪೀಳಿಗೆಗೆ ನಿಖರ ಗುರಿಯೇ ಇಲ್ಲ. ಪ್ರತಿಭೆಗಳನ್ನು ಚಿಕ್ಕಂದಿನಲ್ಲಿ ಗುರುತಿಸಿ ಸೂಕ್ತ ಮಾರ್ಗದರ್ಶನ ಮಾಡಬೇಕು’ ಎಂದರು.

ಮೈಸೂರಿನ ಅಕ್ಷಯ ಆಹಾರ ಫೌಂಡೇಷನ್‌ ಸಂಸ್ಥಾಪಕ ಎಚ್‌.ಆರ್‌. ರಾಜೇಂದ್ರ, ‘ಆಹಾರವನ್ನು ಅಪವ್ಯಯ ಮಾಡಬಾರದು. ಆಹಾರ ಉಳಿಸಿದರೆ ನಮ್ಮ ಆರ್ಥಿಕತೆ ಕೂಡ ಸುಧಾರಿಸುತ್ತದೆ’ ಎಂದರು.

ರಾಮಲಿಂಗೇಶ್ವರ ವಿದ್ಯಾಸಂಸ್ಥೆಯ ಮುಖ್ಯಸ್ಥ ಕೆ.ಎಸ್‌. ಲಕ್ಷ್ಮೀಶ್‌, ಎಂಜಿನಿಯರ್‌ ಶಿವಾನಂದ್‌, ಮಂಜುನಾಥ ಸಮುದಾಯ ಭವನದ ಮಾಲೀಕ ಕೃಷ್ಣನ್‌ ಮಾತನಾಡಿದರು.

ಡಾ.ಬಿ. ಸುಜಯಕುಮಾರ್‌, ಪುರಸಭೆ ಸದಸ್ಯ ಎಂ.ನಂದೀಶ್‌, ಕೆ.ಆರ್‌. ಪ್ರಸನ್ನಕುಮಾರ್‌, ಅನಾರ್ಕಲಿ ಸಲೀಂ, ಮರಿಸ್ವಾಮಿಗೌಡ, ಗಾನಸುಮಾ ಪಟ್ಟಸೋಮನಹಳ್ಳಿ, ಚಂದನ್‌, ಕ್ಯಾತನಹಳ್ಳಿ ಅಮಿತ್‌, ಅಭಿನವ ಭಾರತ್‌ ತಂಡದ ಮಹೇಶ್‌, ಸಂದೇಶ್‌ ಕಲಾವಿದ, ಅಭಿ, ಶಿವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.