ADVERTISEMENT

ಕೆ.ಆರ್.ನಗರ: ಆದಿಶಕ್ತಿ ತೋಪಮ್ಮ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 16:17 IST
Last Updated 4 ಮಾರ್ಚ್ 2025, 16:17 IST
ಕೆ.ಆರ್.ನಗರ ಆದಿಶಕ್ತಿ ತೋಪಮ್ಮನವರ 39ನೇ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಬಣೆಯಿಂದ ನಡೆಯಿತು
ಕೆ.ಆರ್.ನಗರ ಆದಿಶಕ್ತಿ ತೋಪಮ್ಮನವರ 39ನೇ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಬಣೆಯಿಂದ ನಡೆಯಿತು   

ಕೆ.ಆರ್.ನಗರ: ಇಲ್ಲಿನ ಆದಿಶಕ್ತಿ ತೋಪಮ್ಮನವರ 39ನೇ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ದೇವರಿಗೆ ರುದ್ರಾಭಿಷೇಕ, ವಿಶೇಷ ಪೂಜೆ, ಮಹಾ ಮಂಗಳಾರತಿ ಮಾಡಲಾಯಿತು. ತಾಲ್ಲೂಕಿನ ಮಾರಿಗುಡಿ ಕೊಪ್ಪಲು, ಹಳ್ಳದ ಕೊಪ್ಪಲು, ಕೆಂಪನಕೊಪ್ಪಲು, ಕಾಳೇನಹಳ್ಳಿ, ಚೌಕಹಳ್ಳಿ, ಅರಕೆರೆ, ಅರಕೆರೆ ಕೊಪ್ಪಲು, ದೊಡ್ಡೇಕೊಪ್ಪಲು, ಕುಂಬಾರಕೊಪ್ಪಲು ಸೇರಿದಂತೆ ಸುತ್ತಲಿನ ಗ್ರಾಮ, ಪಟ್ಟಣದಿಂದ ಬೆಳಿಗ್ಗೆಯಿಂದ ಸಂಜೆವರೆಗೂ ಆಗಮಿಸಿದ್ದ ಭಕ್ತರು, ಯುವಕ, ಯುವತಿಯರು, ಮಹಿಳೆಯರು, ಮಕ್ಕಳು, ನವದಂಪತಿ ಸರತಿ ಸಾಲಿನಲ್ಲಿ ನಿಂತು ಆದಿಶಕ್ತಿಗೆ ಹೂವು, ಹಣ್ಣು-ಕಾಯಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

 ಜಾತ್ರಾ ಮಹೋತ್ಸವ ಪ್ರಯುಕ್ತ ದೇವಸ್ಥಾನಕ್ಕೆ ತಳಿರು ತೋರಣ ಕಟ್ಟಲಾಗಿತ್ತು. ಒಳ ಮತ್ತು ಹೊರ ಆವರಣದಲ್ಲಿ ವಿಶೇಷವಾಗಿ ವಿದ್ಯುತ್ ದೀಪಾಲಂಕಾರ, ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ADVERTISEMENT

ಕಾಗಿನೆಲೆ ಕನಕಗುರು ಪೀಠದ ಶಿವಾನಂದಪುರಿ ಸ್ವಾಮೀಜಿ, ಅರಕೆರೆ ವಿರಕ್ತ ಮಠದ ಸಿದ್ದೇಶ್ವರ ಸ್ವಾಮೀಜಿ, ಶಾಸಕ ಡಿ.ರವಿಶಂಕರ್, ಪುರಸಭೆ ಅಧ್ಯಕ್ಷ ಶಿವುನಾಯಕ್, ಕೆಪಿಸಿಸಿ ಕಾರ್ಯಕಾರಿಣಿ ಸಮಿತಿ ಸದಸ್ಯ ದೊಡ್ಡಸ್ವಾಮೇಗೌಡ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷೆ ಪುಷ್ಪಲತಾ ಸಿ.ಪಿ.ರಮೇಶ್, ಪುರಸಭೆ ಸದಸ್ಯರಾದ ಕೋಳಿ ಪ್ರಕಾಶ್, ನಟರಾಜು, ಶಂಕರ್ ಸ್ವಾಮಿ, ಕೆ.ಪಿ.ಪ್ರಭುಶಂಕರ್, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ದೊಡ್ಡೇಕೊಪ್ಪಲು ಗ್ರಾ.ಪಂ ಅಧ್ಯಕ್ಷೆ ರಾಜೇಶ್ವರಿ ಬಲರಾಮೇಗೌಡ, ಸದಸ್ಯ ಶೇಖರ್, ಆದಿಶಕ್ತಿ ತೋಪಮ್ಮನವರ ದೇವಾಲಯದ ಟ್ರಸ್ಟ್ ಅಧ್ಯಕ್ಷ ಸಿ.ಎ.ರಾಜು, ಗೌರವ ಅಧ್ಯಕ್ಷ ಅಣ್ಣಯ್ಯನಾಯಕ, ಕಾರ್ಯದರ್ಶಿ ಕೆ.ಪಿ.ಜಗದೀಶ್, ಪದಾಧಿಕಾರಿಗಳಾದ ಯೋಗೀಶ್, ಮಾಟೇಗೌಡ, ಜವರೇಗೌಡ, ರಮೇಶ್, ಟಿ.ಎಲ್.ಪರಶಿವಮೂರ್ತಿ, ಕೆ.ಬಿ.ಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರ ಘಟಕದ ಅಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸಯ್ಯದ್ ಜಾಬೀರ್, ಮುಖಂಡ ಅರಕೆರೆಕೊಪ್ಪಲು ಬಲರಾಮೇಗೌಡ, ಕೆ.ಬಿ.ಸುನೀತಾ ರಮೇಶ್ ಸೇರಿದಂತೆ ಇತರರು ದೇವಾಲಯಕ್ಕೆ ಭೇಟಿ ನೀಡಿ  ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಶನಿಮಾಹತ್ಮೆ ಅಥವಾ ರಾಜವಿಕ್ರಮ ಪೌರಾಣಿಕ ನಾಟಕ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.