ಮೈಸೂರು: ಬಂಕಹಳ್ಳಿ ಗ್ರಾಮದಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಡಾನೆ ತುಳಿತಕ್ಕೆ ಯುವಕ ಮೃತಪಟ್ಟಿದ್ದಾನೆ.
ನಂಜನಗೂಡು ತಾಲೂಕಿನ ವೆಂಕಟಗಿರಿ ಕಾಲೊನಿ ಮತ್ತು ಡೋರನಕಟ್ಟೆ ಕಾಲೊನಿಯ ಮಧ್ಯ ರಸ್ತೆಯಲ್ಲಿ ಘಟನೆ ನಡೆದಿದೆ.
ವೆಂಕಟಗಿರಿ ಆದಿವಾಸಿ ಕಾಲೊನಿಯ ಕೆಂಪ ಮತ್ತು ಚಿಕ್ಕಮ್ಮ ಎಂಬುವರ ಪುತ್ರ ಗಣೇಶ (25) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಹೆಡಿಯಾಲ ಅರಣ್ಯ ವಿಭಾಗದ ಎಸಿಎಫ್ ರವಿಕುಮಾರ್ ಆರ್‌ಎಫ್‌ಒ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಕರಣ ದಾಖಲಾದ ಬಳಿಕ ಸರ್ಕಾರದಿಂದ ಪರಿಹಾರ ಕಲ್ಪಿಸಲಾಗುವುದು ಎಂದು ಅಧಿಕಾರಿಗಳ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.