ADVERTISEMENT

ಮೈಸೂರು: ಆಗಸದಲ್ಲಿ ರಂಗಿನ ಓಕುಳಿ

ಬಿ.ಆರ್.ಸವಿತಾ
Published 31 ಆಗಸ್ಟ್ 2018, 19:30 IST
Last Updated 31 ಆಗಸ್ಟ್ 2018, 19:30 IST
.
.   

ಪ್ರಕೃತಿಯ ಪ್ರತಿಯೊಂದರಲ್ಲಿಯೂ ಚೈತನ್ಯ ಎಂಬುದಿದೆ. ಅದನ್ನು ಗುರುತಿಸುವ ಕಣ್ಣುಗಳಿರಬೇಕಷ್ಟೇ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಆಗಸ. ನೀಲಿ ಬಣ್ಣದ ಆಕಾಶದಲ್ಲಿ ಮೋಡಗಳು ಸುಮ್ಮನೇ ತೇಲುತ್ತವೆ ಎಂದುಕೊಂಡರೆ ಅದು ತಪ್ಪು. ಆಗಸದಲ್ಲಿ ಇವಿಷ್ಟೇ ಅಲ್ಲ, ಕ್ಷಣ ಕ್ಷಣಕ್ಕೂ ಬದಲಾಗುವ ಬಣ್ಣಗಳನ್ನು ಕಾಣಬಹುದು.

ಈ ಬಣ್ಣಗಳ ಬದಲಾವಣೆ ಸ್ಪಷ್ಟವಾಗಿ ಗೋಚರವಾಗುವುದು ಸಂಜೆಯ ವೇಳೆ. ಸುಮ್ಮನೆ ಮುಸ್ಸಂಜೆ ಹೊತ್ತಿನಲ್ಲಿ ಪಡುವಣದತ್ತ ಮುಖ ಮಾಡಿದರೆ ಪ್ರಕೃತಿಯ ಬಣ್ಣದ ಬದಲಾವಣೆಯ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಬಹುದು.

ಹೊಂಬಣ್ಣದ ಜತೆಗೆ ನೇರಳೆ, ಕಿತ್ತಳೆ, ಅರಿಸಿನ... ಹೀಗೆ ನಾನಾ ಬಣ್ಣಗಳು ಕ್ಷಣಕ್ಕೊಂದರಂತೆ ಬದಲಾಗುತ್ತಲೇ ಇರುತ್ತವೆ. ಈ ಸೃಷ್ಟಿ ಚೈತನ್ಯದ ವಿಸ್ಮಯ ಬುಧವಾರ ಸಂಜೆ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ...

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.