ತಿ.ನರಸೀಪುರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಪಿಕಾರ್ಡ್ ಬ್ಯಾಂಕ್ ವಾರ್ಷಿಕ ಸಭೆಯಲ್ಲಿ 15 ರೈತರನ್ನು ಸನ್ಮಾನಿಸಲಾಯಿತು
ತಿ.ನರಸೀಪುರ: ಪಿಕಾರ್ಡ್ ಬ್ಯಾಂಕ್ ಪ್ರಗತಿಯ ದಿಕ್ಕಿನಲ್ಲಿ ಸಾಗುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಕೃಷಿ ಸೇರಿದಂತೆ ವಿವಿಧ ಉದ್ದೇಶಕ್ಕೆ ₹20 ಕೋಟಿ ಸಾಲ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ ಎಂದು ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಕೆಂಪಯ್ಯನಹುಂಡಿ ಎಂ.ಮಹದೇವಣ್ಣ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಬ್ಯಾಂಕಿನ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಷೇರುದಾರರು ಅಗತ್ಯ ದಾಖಲಾತಿಯೊಂದಿಗೆ ಸಾಲಕ್ಕೆ ಅರ್ಜಿ ಸಲ್ಲಿಸಿದಲ್ಲಿ ಎಲ್ಲ ರೈತರಿಗೂ ಸಾಲ ಸಿಗುತ್ತದೆ. ಸಕಾಲಕ್ಕೆ ಮರುಪಾವತಿಸಿ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕ ಎನ್.ಮಹೇಶ್ 2024-25ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.
ಬ್ಯಾಂಕಿನಿಂದ ಸಾಲ ಪಡೆದು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದ 15 ಮಂದಿ ರೈತರನ್ನು ಸನ್ಮಾನಿಸಲಾಯಿತು.
ಬ್ಯಾಂಕಿನ ಉಪಾಧ್ಯಕ್ಷ ಎನ್.ಎನ್.ಮಹದೇವಸ್ವಾಮಿ, ನಿರ್ದೇಶಕರಾದ ಕೆ.ವಜ್ರೇಗೌಡ, ಎಂ.ಎಸ್.ಶಿವಮೂರ್ತಿ, ಎನ್.ಲಿಂಗಪ್ಪಾಜಿ,ಎಂ.ನಾಗರತ್ನ,ರಾಜಮಣ್ಣಿ, ಎ.ಎಂ.ಮಹದೇವ(ಮಧು),ಎಸ್.ಮಹೇಶ್, ಟಿ.ಎಸ್.ಪ್ರಸನ್ನ, ಸಿ.ಸೋಮಣ್ಣ, ಆರ್.ಮಹೇಶ್, ಎನ್.ಅನಿಲ್ ಕುಮಾರ್, ಎಂ.ಕೆ.ಶಿವಕುಮಾರ್, ಬ್ಯಾಂಕಿನ ಪ್ರಭಾರ ಲೆಕ್ಕಿಗ ಪ್ರಭುಸ್ವಾಮಿ, ಟಿ.ಎಂ. ನಾಗರತ್ನ ಬಾಯಿ,ತನುಜ, ಬಿ.ಶಂಕರ ಸೇರಿದಂತೆ ಷೇರುದಾರರು, ರೈತ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.