ADVERTISEMENT

ನಗರದಲ್ಲಿ ಸಂಭ್ರಮದ ಅಂಬೇಡ್ಕರ್‌ ಜಯಂತಿ

ವಿವಿಧ ಸಂಘಟನೆಗಳಿಂದ ಸಭಾ ಕಾರ್ಯಕ್ರಮ, ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 19:42 IST
Last Updated 14 ಏಪ್ರಿಲ್ 2019, 19:42 IST
ಪುರಭವನ ಆವರಣದಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಮಾಲಾರ್ಪಣೆ ಮಾಡಿದರು. ಪೊಲೀಸ್ ಕಮಿಷನರ್‌ ಕೆ.ಟಿ.ಬಾಲಕೃಷ್ಣ, ಎಸ್ಪಿ ಅಮಿತ್ ಸಿಂಗ್, ನಗರಪಾಲಿಕೆ ಆಯುಕ್ತರಾದ ಶಿಲ್ಪಾನಾಗ್, ಜಿ.ಪಂ ಸಿಇಒ ಕೆ.ಜ್ಯೋತಿ ಇದ್ದಾರೆ (ಎಡಚಿತ್ರ). ಅಂಬೇಡ್ಕರ್‌ ಪ್ರತಿಮೆಗೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು
ಪುರಭವನ ಆವರಣದಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಮಾಲಾರ್ಪಣೆ ಮಾಡಿದರು. ಪೊಲೀಸ್ ಕಮಿಷನರ್‌ ಕೆ.ಟಿ.ಬಾಲಕೃಷ್ಣ, ಎಸ್ಪಿ ಅಮಿತ್ ಸಿಂಗ್, ನಗರಪಾಲಿಕೆ ಆಯುಕ್ತರಾದ ಶಿಲ್ಪಾನಾಗ್, ಜಿ.ಪಂ ಸಿಇಒ ಕೆ.ಜ್ಯೋತಿ ಇದ್ದಾರೆ (ಎಡಚಿತ್ರ). ಅಂಬೇಡ್ಕರ್‌ ಪ್ರತಿಮೆಗೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು   

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 128ನೇ ಜನ್ಮದಿನವನ್ನು ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ನಗರದ ವಿವಿಧ ಸಂಘ – ಸಂಸ್ಥೆಗಳು ಸಭಾ ಕಾರ್ಯಕ್ರಮ, ಮೆರವಣಿಗೆ, ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಂಬೇಡ್ಕರ್‌ ಆಶಯಗಳನ್ನು ನೆನೆದವು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪುರಭವನದ ಆವರಣದಲ್ಲಿ ಅಂಬೇಡ್ಕರ್ ಜನ್ಮ ದಿನಾಚರಣೆ ನಡೆಯಿತು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಜಿ.ಪಂ ಸಿಒಇ ಕೆ.ಜ್ಯೋತಿ, ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಚಿವರಾದ ಜಿ.ಟಿ.ದೇವೇಗೌಡ, ಸತೀಶ್ ಜಾರಕಿಹೊಳಿ, ಶಾಸಕ ಶ್ರೀರಾಮುಲು, ಮೇಯರ್ ಪುಷ್ಪಲತಾ ಜಗನ್ನಾಥ್ ಸೇರಿದಂತೆ ಮುಖಂಡರು ಗೌರವ ಸಮರ್ಪಿಸಿದರು.

ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗಳಿಗೆ ಹಲವು ಸಂಘಟನೆಗಳು ಮತ್ತು ಸಾರ್ವಜನಿಕರ ವತಿಯಿಂದ ಪುರ್ಷ್ಪಾಚನೆ ಮಾಡಿ ಗೌರವಿಸಲಾಯಿತು. ಮೈಸೂರು ವಿಶ್ವವಿದ್ಯಾಲಯ ಎಸ್‌ಸಿ, ಎಸ್‌ಟಿ ನೌಕರರ ಸಂಘ, ವಿಶ್ವ ಮಾನವ ಮೈಸೂರು ವಿ.ವಿ ನೌಕರರ ವೇದಿಕೆ ನೇತೃತ್ವ ವಹಿಸಿದ್ದವು. ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌, ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಮಹಾರಾಜ ಕಾಲೇಜು ಪ್ರಾಂಶುಪಾಲರಾದ ಪ್ರೊ.ಸಿ.ಪಿ.ಸುನೀತಾ ಭಾಗವಹಿಸಿದ್ದರು.

ADVERTISEMENT

ಅಶೋಕಪುರಂನ ಅಂಬೇಡ್ಕರ್‌ ಉದ್ಯಾನದ ಬಳಿಯಿಂದ ಆದಿಕರ್ನಾಟಕ ಮಹಾ ಸಂಸ್ಥೆ ಹಾಗೂ ಯುವ ಸಂಘಟನೆಗಳ ಒಕ್ಕೂಟ ಸಹಯೋಗದಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆಯು ಅಶೋಕಪುರಂ ಉದ್ಯಾನದಿಂದ ಅಶೋಕ ವೃತ್ತ, ಆರ್‌ಟಿಒ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ವೃತ್ತ, ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತದ ಮೂಲಕ ಪುರಭವನಕ್ಕೆ ಸೇರಿತು.

ಆದಿ ಕರ್ನಾಟಕದ ಮಹಾ ಸಂಸ್ಥೆಯ ಅಧ್ಯಕ್ಷ ಸಿ.ವಿಜಯಕುಮಾರ್, ಉಪಾಧ್ಯಕ್ಷ ಸಿ.ಎಂ.ಮಹಾಲಿಂಗು, ಕಾರ್ಯದರ್ಶಿ ಎಂ.ಗಂಗಾಧರ್, ಸಹ ಕಾರ್ಯದರ್ಶಿ ಎಂ.ಗಂಗಾಧರ್, ಖಜಾಂಚಿ ಎಂ.ಎನ್.ಶಿವಪ್ರಸಾದ್ ಭಾಗವಹಿಸಿದ್ದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಪುರಭವನದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಶ್ವತ್ಥ ನಾರಾಯಣರಾಜೇ ಅರಸ್, ಪಿ.ಮರಂಕಯ್ಯ, ಪ್ರಭಾಕರ್, ಮಹೇಶ್, ಬಸಪ್ಪನಾಯಕ, ಚಂದ್ರಶೇಖರ್ ಭಾಗವಹಿಸಿದ್ದರು.

ಗಾಂಧಿನಗರ: ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಗಾಂಧಿನಗರ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಭೀಮ ರಥೋತ್ಸವ ನಡೆಯಿತು. ಗಾಂಧಿನಗರದ ಬಸ್‌ನಿಲ್ದಾಣದಿಂದ ಆರಂಭವಾದ ರಥೋತ್ಸವ ಪ್ರಮುಖ ರಸ್ತೆಗಳ ಮೂಲಕ ಪುರಭವನ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.