ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಅಧಿಕಾರಿಗಳು ಹಾಗೂ ವ್ಯವಸ್ಥಾಪಕರಿಗೆ ಪ್ರಾಣಿಗಳ ನಿರ್ವಹಣೆ ಕುರಿತು ಈಚೆಗೆ ತರಬೇತಿ ಕಾರ್ಯಕ್ರಮ ನಡೆಯಿತು.
ಭಾರತದಲ್ಲಿ ಮೃಗಾಲಯ ನಿರ್ವಹಣೆ, ಶಾಸನ, ನೀತಿ ಮುಂತಾದ ನಿರ್ಣಾಯಕ ವಿಷಯಗಳನ್ನು ತಿಳಿಸಲಾಯಿತು. ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಗಳು, ಪ್ರಾಣಿಗಳ ಸಂರಕ್ಷಣೆ, ರೋಗಗಳು ಬಾರದಂತೆ ಕಣ್ಗಾವಲು, ಮೃಗಾಲಯಗಳಲ್ಲಿ ಮಾಸ್ಟರ್ ಪ್ಲಾನ್ ಸಂರಕ್ಷಣಾ ತಳಿ ಕೇಂದ್ರಗಳ ತಜ್ಞರು ಮಾಹಿತಿ ನೀಡಿದರು.
ದುಬಾರೆ ಆನೆ ಶಿಬಿರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಪ್ರಾದೇಶಿಕ ಪ್ರಾಚ್ಯ ವಸ್ತುಗಳ ಸಂಗ್ರಹಾಲಯ, ಹುಣಸೂರಿನ ಲಿಯಾನಾ ಟ್ರಸ್ಟ್‌ಗಳಿಗೆ ಭೇಟಿ ನೀಡಿದ್ದು, ವನ್ಯಜೀವಿಗಳ ಪ್ರತ್ಯಕ್ಷ ಅನುಭವವನ್ನು ನೀಡಿತು.
ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.