25ನೇ ಕಾರ್ಗಿಲ್ ವಿಜಯ್ ದಿವಸ್ ಹಾಗೂ ‘ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್’ನ (ಎಂಇಜಿ) 224ನೇ ವಾರ್ಷಿಕೋತ್ಸವ ಪ್ರಯುಕ್ತ ತಿರುವನಂತಪುರದಿಂದ ಬೆಂಗಳೂರಿಗೆ ಹೊರಟಿರುವ ಐವರು ಸೇನಾ ಯೋಧರ ಇ–ಬೈಕ್ ರ‍್ಯಾಲಿ
ಮೈಸೂರು: ಜಯಲಕ್ಷ್ಮಿಪುರಂನ ಕೊಡಗು ಸಹಕಾರ ಸಂಘದ ಅಂಗಳದಲ್ಲಿ ಕೇರಳದ ತಿರುವನಂತಪುರದಿಂದ ಬಂದ ಇ–ಬೈಕ್ ರ‍್ಯಾಲಿಯ ಐವರು ಮಾಜಿ ಯೋಧರನ್ನು ನಿವೃತ್ತ ಮೇಜರ್ ಜನರಲ್ ಸುಧೀರ್ ಒಂಭತ್ಕೆರೆ ಹಾಗೂ ಮೈಸೂರು ಸಶಸ್ತ್ರ ಪಡೆಗಳ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಿ.ಕೆ.ಬಿದ್ದಪ್ಪ ಸ್ವಾಗತಿಸಿ, ಬೀಳ್ಕೊಟ್ಟರು.
25ನೇ ಕಾರ್ಗಿಲ್ ವಿಜಯ್ ದಿವಸ್ ಹಾಗೂ ‘ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್’ನ (ಎಂಇಜಿ) 224ನೇ ವಾರ್ಷಿಕೋತ್ಸವ ಪ್ರಯುಕ್ತ ತಿರುವನಂತಪುರದಿಂದ ಬೆಂಗಳೂರಿಗೆ ರ‍್ಯಾಲಿ ನಡೆಯುತ್ತಿದ್ದು, ಮಂಗಳವಾರ ರಾತ್ರಿ ಅವರನ್ನು ಸ್ವಾಗತಿಸಲಾಗಿತ್ತು. ಬುಧವಾರ ಬೆಳಿಗ್ಗೆ 9.30ಕ್ಕೆ ಅವರಿಗೆ ವಂದನೆ ಸಲ್ಲಿಸಿದರು.
ಎನ್‌ಸಿಸಿ ಕೆಡೆಟ್‌ಗಳು ಪಥ ಸಂಚಲನ ನಡೆಸಿ ಗೌರವ ಸಲ್ಲಿಸಿದರು. ರ‍್ಯಾಲಿಯು ಬೆಳಗಾವಿ, ತಿರುವನಂತಪುರ, ಹೈದರಾಬಾದ್ ಹಾಗೂ ಕನ್ಯಾಕುಮಾರಿಯಿಂದ ಹೊರಟು ನ.22ರಂದು ಬೆಂಗಳೂರು ತಲುಪಲಿದ್ದು, ಅಲ್ಲಿ ವಿಜಯ್ ದಿವಸ್ ಹಾಗೂ ಎಂಇಜಿಯ ವಾರ್ಷಿಕೋತ್ಸವ ನಡೆಯಲಿದೆ.
ಸಂಘದ ಉಪಾಧ್ಯಕ್ಷ ನರಸೇಗೌಡ, ಮೇಜರ್ ಸೀತಾಶಿಖಾ, ಸುಬೇದಾರ್ ಎಚ್.ಡಿ.ಪಿಳ್ಳೈ, ನಿವೃತ್ತ ಲೆಫ್ಟಿನೆಂಟ್ ರಾಜೇಂದ್ರ ಹಾಗೂ 150ಕ್ಕೂ ನಿವೃತ್ತ ಸೇನಾ ಅಧಿಕಾರಿಗಳು ಹಾಗೂ ಯೋಧರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.