ADVERTISEMENT

ಚಿತ್ರಕಲೆ: ಅಭಿಜನ್ ಪ್ರಥಮ ಸ್ಥಾನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 12:50 IST
Last Updated 16 ನವೆಂಬರ್ 2022, 12:50 IST
ಮೈಸೂರಿನ ಎಚ್.ವಿ.ರಾಜೀವ್ ಸ್ನೇಹ ಬಳಗದಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಹಾಗೂ ಪಾಲ್ಗೊಂಡವರಿಗೆ ಪ್ರಮಾಣಪತ್ರ ವಿತರಿಸಲಾಯಿತು
ಮೈಸೂರಿನ ಎಚ್.ವಿ.ರಾಜೀವ್ ಸ್ನೇಹ ಬಳಗದಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಹಾಗೂ ಪಾಲ್ಗೊಂಡವರಿಗೆ ಪ್ರಮಾಣಪತ್ರ ವಿತರಿಸಲಾಯಿತು   

ಮೈಸೂರು: ಎಚ್.ವಿ.ರಾಜೀವ್ ಸ್ನೇಹ ಬಳಗದಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಇಲ್ಲಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯ ಸುಮಸೋಪಾನ ಉದ್ಯಾನದಲ್ಲಿ ಪರಿಸರದ ಬಗ್ಗೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಉಚಿತವಾಗಿ ನಡೆಸಲಾಯಿತು.

ಬಿಲ್ವಪತ್ರೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮೊದಲನೇ ಬಹುಮಾನ (₹ 3ಸಾವಿರ, ಗಿಫ್ಟ್ ವೋಚರ್, ಪ್ರಶಸ್ತಿಪತ್ರ ಮತ್ತು ಪದಕ)ವನ್ನು ಲಯನ್ ವೆಸ್ಟ್‌ ಶಾಲೆಯ ವಿದ್ಯಾರ್ಥಿನಿ ಕೆ.ಅಭಿಜನ್, 2ನೇ ಬಹುಮಾನ (₹ 2ಸಾವಿರ, ಗಿಫ್ಟ್ ವೋಚರ್, ಪ್ರಶಸ್ತಿ ಪತ್ರ ಮತ್ತು ಪದಕ)ವನ್ನು ಬೇಡನ್ ಪೊವೆಲ್‌ ವಿದ್ಯಾರ್ಥಿ ಸ್ಕಂದ ಆರ್. ಆಚಾರ್ಯ ಹಾಗೂ 3ನೇ ಬಹುಮಾನ ₹ 1ಸಾವಿರ (ಗಿಫ್ಟ್ ವೋಚರ್, ಪ್ರಶಸ್ತಿ ಪತ್ರ ಮತ್ತು ಪದಕ)ವನ್ನು ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಅಭಿ ಪಡೆದರು. ಪಾಲ್ಗೊಂಡಿದ್ದ ಎಲ್ಲರಿಗೂ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಲಾಯಿತು.

ADVERTISEMENT

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ. ರಾಜೀವ್, ಕೈಗಾರಿಕೋದ್ಯಮಿ ಶೇಖರ್, ಮುಖಂಡ ಭೈರಪ್ಪ, ನಗರಪಾಲಿಕೆ ಸದಸ್ಯ ಎಂ.ಸಿ.ರಮೇಶ್, ಪೂರ್ಣಪ್ರಜ್ಞ ವಿದ್ಯಾಕೇಂದ್ರದ ಶಾಲೆಯ ಅಧ್ಯಕ್ಷ ಜೆ.ಲೋಕೇಶ್, ಕಲಾವಿದ ಮುತ್ತಪ್ಪ, ರಾಜೀವ್ ಸ್ನೇಹ ಬಳಗದ ಸಂಚಾಲಕ ಕುಮಾರ್ ಉಪಸ್ಥಿತರಿದ್ದರು.

ಪೂರ್ಣಪ್ರಜ್ಞ ವಿದ್ಯಾ ಕೇಂದ್ರ ಶಾಲೆಯ ಶಿಕ್ಷಕಿಯರು ಮತ್ತು ರಾಜೀವ್ ಸ್ನೇಹ ಬಳಗದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.