ADVERTISEMENT

ಮೈಸೂರು ನಗರದ ದೇಗುಲಗಳಲ್ಲೂ ಆಷಾಢ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 12:53 IST
Last Updated 1 ಜುಲೈ 2022, 12:53 IST
ಆಷಾಢದ ಮೊದಲನೇ ಶುಕ್ರವಾರದ ಪ್ರಯುಕ್ತ ಚಾಮುಂಡಿಪುರಂ ವೃತ್ತದ ಬಳಿ ಚಾಮುಂಡೇಶ್ವರಿ ಪ್ರತಿಮೆಗೆ ಪೂಜೆ ನೆರವೇರಿಸಲಾಯಿತು. ಕಾಂಗ್ರೆಸ್ ಮುಖಂಡ ಎಂ.ಕೆ. ಸೋಮಶೇಖರ್, ಪರಿಸರ ಹೋರಾಟಗಾರ್ತಿ ಭಾನುಮೋಹನ್, ದಾರಿದೀಪ ಚಾರಿಟಬಲ್ ಟ್ರಸ್ಟ್‌ನ ಪ್ರದೀಪ್ ಕುಮಾರ್, ನಾಗೇಂದ್ರ, ರಾಜಣ್ಣ, ಶಿವಕುಮಾರ್, ಚಂದ್ರು, ಕುಮಾರ್ ಇದ್ದಾರೆ

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರದ ಅಂಗವಾಗಿ ನಗರದ ಆದಿಶಕ್ತಿ ದೇಗುಲಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ವಿಶೇಷ ಪೂಜೆ, ಪುನಸ್ಕಾರ, ಅಲಂಕಾರ ಹಾಗೂ ಪ್ರಸಾದ ವಿತರಣೆ ನಡೆದವು.

ಚಾಮುಂಡಿಪುರಂ ವೃತ್ತದ ಬಳಿ ಚಾಮುಂಡೇಶ್ವರಿ ಪ್ರತಿಮೆಗೆ ಪೂಜೆ ನೆರವೇರಿಸಿ ಪ್ರಸಾದ ವಿತರಿಸಲಾಯಿತು.ಕಾಂಗ್ರೆಸ್ ಮುಖಂಡ ಎಂ.ಕೆ. ಸೋಮಶೇಖರ್, ಪರಿಸರ ಹೋರಾಟಗಾರ್ತಿ ಭಾನುಮೋಹನ್, ದಾರಿದೀಪ ಚಾರಿಟಬಲ್ ಟ್ರಸ್ಟ್‌ನ ಪ್ರದೀಪ್ ಕುಮಾರ್, ನಾಗೇಂದ್ರ, ರಾಜಣ್ಣ, ಶಿವಕುಮಾರ್, ಚಂದ್ರು, ಕುಮಾರ್ ಭಾಗವಹಿಸಿದ್ದರು.

ಸುಣ್ಣದಕೇರಿ, ದೊಡ್ಡಒಕ್ಕಲಗೇರಿ ಚಾಮುಂಡೇಶ್ವರಿ ದೇವಸ್ಥಾನಗಳು, ಶಂಕರ ಮಠದ ಶಾರದಾಂಬೆ, ತೊಗರಿ ಬೀದಿಯ ಕೊಲ್ಹಾಪುರದಮ್ಮ, ವಿಶ್ವೇಶ್ವರನಗರ ರಾಜರಾಜೇಶ್ವರಿ, ವಿಜಯನಗರದ ಸಪ್ತಮಾತೃಕಾ, ಕುವೆಂಪು ನಗರದ ಬಂದಂತಮ್ಮ ಕಾಳಮ್ಮ, ಜ್ಯೋತಿ ನಗರ ದೇವಸ್ಥಾನ, ಕೆ.ಜಿ. ಕೊಪ್ಪಲು ಚಾಮುಂಡೇಶ್ವರಿ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ನೆರವೇರಿತು. ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

ADVERTISEMENT

ಕುವೆಂಪುನಗರದ ನ್ಯೂ ಕಾಂತರಾಜ ಅರಸ್ ರಸ್ತೆಯಲ್ಲಿರುವ ಬಂದಂತಮ್ಮ ಮತ್ತು ಕಾಳಮ್ಮ ದೇವಸ್ಥಾನ ಸೇವಾ ಸಮಿತಿಯಿಂದ ದೇವಸ್ಥಾನದಲ್ಲಿ ಮೂರ್ತಿಯನ್ನು ಕವಡೆಗಳಿಂದ ಅಲಂಕರಿಸಲಾಗಿತ್ತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.