
ಬೆಟ್ಟದಪುರ: ಸಮೀಪದ ಮಾದೇಶ್ವರ ಮಠದಕೊಪ್ಪಲು ಗ್ರಾಮದ ಯುವಕರು ಹಾಗೂ ಮೈಸೂರು ಮೂಲದ ಉತ್ಸಾಹಿ ಯುವಕರ ನಮ್ಮರಾಗ ತಂಡ ಬೆಂಗಳೂರಿನಲ್ಲಿ ನಡೆಯುತ್ತಿರುವ ಅವರೆ ಬೇಳೆ ಮೇಳದಲ್ಲಿ ಜನಪದ ಹಾಡನ್ನು ಹಾಡುವ ಮೂಲಕ ರೈತರ ಮತ್ತು ಅಲ್ಲಿರುವ ಜನರ ಗಮನ ಸೆಳೆದರು.
ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ವಾಸವಿ ಕಾಂಡಿಮೆಂಟ್ಸ್ ಸಂಸ್ಥೆ ವತಿಯಿಂದ ಆಯೋಜಿಸಿರುವ ಅವರೆ ಬೇಳೆ ಮೇಳ ಸಂಜೆಯ ಕಾರ್ಯಕ್ರಮದಲ್ಲಿ ಮೂರು ತಾಸು, ಜನಪದ ಗೀತೆಗಳ ಹಾಡು ಮತ್ತು ನೃತ್ಯ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದರು. ಅದರಲ್ಲಿಯೂ ಮರೆಯೋದುಂಟೆ ಮೈಸೂರು ದೊರೆಯ, ನೇಗಿಲ ಯೋಗಿ (ರೈತ ಗೀತೆ), ಭಟ್ರು ಹೆಂಡತಿ (ನಗೆ ಜಾನಪದ ಗೀತೆ), ಮಂಟೇ ಸ್ವಾಮಿ ಜಾನಪದ ಗೀತೆಗಳು ಹಾಡಿ ಅಲ್ಲಿದ್ದವರನ್ನು ರಂಜಿಸಿದವು.
ನಮ್ಮ ರಾಗ ತಂಡವು ರಾಜ್ಯ ಮಟ್ಟದ ಯೂತ್ ಫೆಸ್ಟಿವಲ್ ಕಾರ್ಯಕ್ರಮ ಹಾಗೂ ಜಿಲ್ಲಾ ಯೂಥ್ ಫೆಸ್ಟಿವಲ್ ಕಾರ್ಯಕ್ರಮದಲ್ಲೂ ಭಾಗವಹಿಸಿ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ದೀವಿತ್.ಸಿ, ವಿನಯ್.ಆರ್, ನಿತಿನ್ ಕೃಷ್ಣ ಸಿ.ಎಂ, ನಿತ್ಯಾ.ಬಿ.ಎನ್, ಜೋಗಿಕುಮಾರ್, ಪ್ರಿಯಾ, ಸಿದ್ದು, ರತನ್.ಎಂ.ಕೆ, ಹರ್ಷನ್.ಎಂ.ಎಚ್, ಶಶಾಂಕ್, ತ್ರಿಷಾ, ಸಂಜನಾ, ರಾಘವಿ, ತರುಣ್, ಬಸವರಾಜು.ಬಿ.ಎಂ, ಕೀರ್ತನಾ, ಮನಸ್ವಿನಿ, ಜಗಜೀವನ್, ಸಂವಾರ್ದಿತ, ಅಜಯ್,ಅಭಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.