ಮೈಸೂರು: ಇಲ್ಲಿನ ಬಿಇಎಂಎಲ್– ಕೆಆರ್‌ಎಸ್ ಮುಖ್ಯ ರಸ್ತೆಯ ವಿನಾಯಕ ದೇವಸ್ಥಾನದ ಆವರಣದಲ್ಲಿ ಕೆಬಿಎಲ್ ಸಿದ್ಧಿ ವಿನಾಯಕ ಟ್ರಸ್ಟ್‌ನಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ನಡೆಯಿತು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಈ.ಸಿ.ನಿಂಗರಾಜ್ ಗೌಡ ಮಾತನಾಡಿ, ‘ಈ ರೀತಿಯ ಪುರಸ್ಕಾರದಿಂದ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ದೊರೆಯುತ್ತದೆ’ ಎಂದರು.
‘ಟ್ರಸ್ಟ್‌ನಿಂದ ಅಧ್ಯಕ್ಷ ಎಲ್. ರವಿ ಮಾರ್ಗದರ್ಶನದಲ್ಲಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮ ಹಾಗೂ ಹಲವು ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ’ ಎಂದರು.
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಎಸ್ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೈಸೂರು ಮತ್ತು ಮಂಡ್ಯ ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 18 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡಿದ ಮುರುಗೇಶ್, ಗೋಪಾಲ್, ಸುಧೀರ್, ದೇವರಾಜು, ಕಿರಣ್, ಸುರೇಶ್, ಮಹೇಶ್ ಮತ್ತು ಶಿವಣ್ಣ ಅವರನ್ನು ಅಭಿನಂದಿಸಲಾಯಿತು.
ಕೆಬಿಎಲ್ ಸಿಲಿಕಾನ್ ಸಿಟಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್. ಸಂತೋಷ್, ಖಜಾಂಚಿ ಎಂ. ಮೋಹನ್, ಉಮಾಶಂಕರ್ ಆರಾಧ್ಯ, ಎನ್.ಕಿರಣ್, ಬಿ.ಎನ್. ಸುರೇಶ್, ಬಿ.ಬಿ.ಮಧುಕರ್, ನಿತೀನ್, ದೀಲಿಪ್ ಆರಾಧ್ಯ, ಪತ್ರಕರ್ತ ಎಂ.ಆರ್. ಸತ್ಯನಾರಾಯಣ, ರವಿ, ರಾಜು, ವೆಂಕಟೇಶ್, ಪ್ರಶಾಂತ್, ಕೆ. ವಿವೇಕ್ ಗೌಡ, ವೈ.ಎಚ್. ಲೋಹಿತ್ ಕುಮಾರ್, ಡಿ.ಶ್ರೀಕಂಠೇಗೌಡ, ಎಚ್.ಡಿ.ರಮೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.