
ಮೈಸೂರು: ಇಲ್ಲಿನ ‘ರಂಗಾಯಣ’ವು 2026ರ ಜ.12ರಿಂದ 18ರ ವರೆಗೆ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಆಯೋಜಿಸಿದೆ. ‘ಬಹುರೂಪಿ ಬಾಬಾ ಸಾಹೇಬ್’ ಆಶಯದಲ್ಲಿ ನಡೆಯಲಿರುವ ಉತ್ಸವಕ್ಕೆ ಅಂಬೇಡ್ಕರ್ ಬದುಕು– ಬರಹ– ಹೋರಾಟ ನೆನಪಿಸುವ ದಮನಿತ, ಶೋಷಿತ ಸಮುದಾಯಗಳ ಕಥನದ ನಾಟಕಗಳ ಪ್ರದರ್ಶನಕ್ಕೆ ಅರ್ಜಿ ಆಹ್ವಾನಿಸಿದೆ.
ಕನ್ನಡ, ಇಂಗ್ಲಿಷ್ ಸೇರಿದಂತೆ ಇತರೆ ಭಾರತೀಯ ಭಾಷೆಗಳ ನಾಟಕಗಳು ಹಾಗೂ ‘ಮಕ್ಕಳ ಬಹುರೂಪಿ’ಗೆ ಮಕ್ಕಳ ನಾಟಕಗಳನ್ನು ರೂಪಿಸಿರುವ ತಂಡಗಳು ರಂಗಾಯಣದ ವೆಬ್‌ಸೈಟ್: rangayanamysore.karnataka.gov.in ನಲ್ಲಿ ಅರ್ಜಿಯನ್ನು ಡೌನ್‌ಲೋಡ್ ಮಾಡಿ ತಂಡ, ನಾಟಕದ ವಿವರ ಹಾಗೂ ವಿಡಿಯೊದ ಪೆನ್‌ಡ್ರೈವ್ ಜೊತೆಗೆ ನ.25ರೊಳಗೆ ರಂಗಾಯಣಕ್ಕೆ ಅರ್ಜಿಯನ್ನು ಕಳುಹಿಸಬೇಕು.
ನಾಟಕದ ಯೂಟ್ಯೂಬ್ ಲಿಂಕ್ ಅನ್ನು ಇಮೇಲ್: bahuroopifestival@gmail.com ಗೆ ಕಳುಹಿಸಬಹುದು. ಉತ್ಸವಕ್ಕೆ ಆಯ್ಕೆಯಾಗುವ ನಾಟಕ ತಂಡಗಳಿಗೆ ರಂಗಾಯಣದ ನಿಯಮಾನುಸಾರ ಗೌರವ ಸಂಭಾವನೆ, ಪ್ರಯಾಣ ವೆಚ್ಚ ಪಾವತಿಸಲಾಗುವುದು. ಆತಿಥ್ಯ ವ್ಯವಸ್ಥೆ ಇರಲಿದೆ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.