
ಬಂಧನ
ಮೈಸೂರು: ಬ್ಯಾಂಕ್‌ಗೆ ವಂಚಿಸಿದ ಆರೋಪ ಸಾಬೀತಾದ ಕಾರಣ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕೆಂಪಯ್ಯನಹಟ್ಟಿ ನಿವಾಸಿ ಎಂ.ನವೀನ್ ಕುಮಾರ್‌ಗೆ ಒಂದನೇ ಅಧಿಕ ಸಿಜೆಎಂ ನ್ಯಾಯಾಲಯವು 3 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ನವೀನ್ ಕೆ.ಆರ್. ಮೊಹಲ್ಲಾದ ಇಂಡಸ್ ಇಂಡ್ ಬ್ಯಾಂಕಿನಲ್ಲಿ ಕಮರ್ಷಿಯಲ್ ವೆಹಿಕಲ್ ವಿಭಾಗದ ಸಹಾಯಕ ಮ್ಯಾನೇಜರ್ ಆಗಿದ್ದು, ತಮ್ಮ ಬ್ಯಾಂಕ್‌ಗೆ ಮೋಸ ಮಾಡುವ ಉದ್ದೇಶದಿಂದ ಮಣಿಕಂದನ್ ಎಂಬುವರ ಹೆಸರಿನಲ್ಲಿ ಸುಂದರೇಶನ್ ಹೆಸರಿನ ಗ್ಯಾರಂಟಿಯರ್ ಮಾಡಿ ಬಳಕೆಯಾದ ಲಾರಿಗೆ ₹14.87 ಲಕ್ಷ ಲೋನ್ ಮಂಜೂರಾಗುವಂತೆ ಮಾಡಿದ್ದರು. ನಂತರ ಅದರಲ್ಲಿ ₹7 ಲಕ್ಷ ಪಡೆದು ತಾವು ಹೊಸ ಲಾರಿ ಖರೀದಿಸಿದ್ದರು. ಈ ಬಗ್ಗೆ ಕೆ.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಇನ್‌ಸ್ಪೆಕ್ಟರ್ ಶ್ರೀನಿವಾಸ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಎ.ಜಿ.ಶಿಲ್ಪ ವಿಚಾರಣೆ ನಡೆಸಿ, 3 ವರ್ಷ ಜೈಲು ₹ 20 ಸಾವಿರ ದಂಡ ಹಾಗೂ ದೂರುದಾರರಿಗೆ ₹ 10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಕೆ.ಪ್ರಕಾಶ್ ಸರ್ಕಾರದ ಪರವಾಗಿ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.