ADVERTISEMENT

ಬೆಟ್ಟದಪುರ: ಸಿಡಿಲು ಮಲ್ಲಿಕಾರ್ಜುನ ತೆಪ್ಪೋತ್ಸವ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 4:11 IST
Last Updated 7 ಫೆಬ್ರುವರಿ 2026, 4:11 IST
ಬೆಟ್ಟದಪುರದ ಹೊರವಲಯದಲ್ಲಿರುವ ತಾವರೆಕೆರೆಯಲ್ಲಿ ಗುರುವಾರ ರಾತ್ರಿ ಭ್ರಮರಾಂಭ ಸಮೇತ ಸಿಡಿಲು (ಶಿಡ್ಲು) ಮಲ್ಲಿಕಾರ್ಜುನ ಸ್ವಾಮಿಯ ತೆಪ್ಪೋತ್ಸವ ನಡೆಯಿತು
ಬೆಟ್ಟದಪುರದ ಹೊರವಲಯದಲ್ಲಿರುವ ತಾವರೆಕೆರೆಯಲ್ಲಿ ಗುರುವಾರ ರಾತ್ರಿ ಭ್ರಮರಾಂಭ ಸಮೇತ ಸಿಡಿಲು (ಶಿಡ್ಲು) ಮಲ್ಲಿಕಾರ್ಜುನ ಸ್ವಾಮಿಯ ತೆಪ್ಪೋತ್ಸವ ನಡೆಯಿತು   

ಬೆಟ್ಟದಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಭ್ರಮರಾಂಭ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ತೆಪ್ಪೋತ್ಸವ ಗುರುವಾರ ರಾತ್ರಿ ಕುಶಾಲನಗರ ರಸ್ತೆಯಲ್ಲಿರುವ ತಾವರೆಕೆರೆಯಲ್ಲಿ ನಡೆಯಿತು.

ಸಂಜೆ 7ಕ್ಕೆ ಶೇಷವಾಹನ ಉತ್ಸವಕ್ಕೆ ಗ್ರಾಮದ ಹೃದಯ ಭಾಗದಲ್ಲಿರುವ ಸಿಡಿಲು ಮಲ್ಲಿಕಾರ್ಜುನ ದೇವಾಲಯದಿಂದ ಚಾಲನೆ ನೀಡಲಾಯಿತು. ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡಿ ನಂತರ ತಾವರೆಕೆರೆಯ ಬಳಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ತೆಪ್ಪದ ಮೇಲೆ ಬೆಳ್ಳಿಬಸವ, ವಿಘ್ನೇಶ್ವರ, ಭ್ರಮರಾಂಭ ಹಾಗೂ ಮಲ್ಲಿಕಾರ್ಜುನ ಸ್ವಾಮಿಯ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಿ ಕೆರೆಯಲ್ಲಿ ಪ್ರದಕ್ಷಿಣೆ ಮಾಡಿಸಲಾಯಿತು.

ಈ ವೇಳೆ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ದೇವಾಲಯಕ್ಕೆ ಉತ್ಸವ ಮೂರ್ತಿಗಳು ಮರಳಿ ತಲುಪಿದ ನಂತರ ಧ್ವಜಾವರೋಹಣ ಮಾಡುವ ಮೂಲಕ ಬೆಟ್ಟದಪುರ ಜಾತ್ರೆಗೆ ತೆರೆ ಎಳೆಯಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.