ADVERTISEMENT

ರೈಲ್ವೆ ಮೇಲ್ಸೇತುವೆಗೆ ಶ್ರೀನಿವಾಸ್ ಪ್ರಸಾದ್ ಹೆಸರಿಡಿ

ಬಿಜೆಪಿ ಕಾರ್ಯಕರ್ತರಿಂದ ಅಧ್ಯಕ್ಷ ಹಾಗೂ ಆಯುಕ್ತರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 6:00 IST
Last Updated 12 ಜುಲೈ 2025, 6:00 IST
ನಂಜನಗೂಡಿನ ಸುಜಾತಪುರಂ ಬಳಿ ನಿರ್ಮಿಸಿರುವ ‌ರೈಲ್ವೆ ಮೇಲ್ಸೆತುವೆಗೆ ಮಾಜಿ ಸಂಸದ, ದಿವಂಗತ ಶ್ರೀನಿವಾಸ್ ಪ್ರಸಾದ್ ಅವರ ಹೆಸರಿಡಬೇಕು ಎಂದು ಆಗ್ರಹಿಸಿ ನಗರಸಭೆ ಅಧ್ಯಕ್ಷ ಹಾಗೂ ಆಯುಕ್ತರಿಗೆ ಶುಕ್ರವಾರ ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿದ್ದರಾಜು ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು
ನಂಜನಗೂಡಿನ ಸುಜಾತಪುರಂ ಬಳಿ ನಿರ್ಮಿಸಿರುವ ‌ರೈಲ್ವೆ ಮೇಲ್ಸೆತುವೆಗೆ ಮಾಜಿ ಸಂಸದ, ದಿವಂಗತ ಶ್ರೀನಿವಾಸ್ ಪ್ರಸಾದ್ ಅವರ ಹೆಸರಿಡಬೇಕು ಎಂದು ಆಗ್ರಹಿಸಿ ನಗರಸಭೆ ಅಧ್ಯಕ್ಷ ಹಾಗೂ ಆಯುಕ್ತರಿಗೆ ಶುಕ್ರವಾರ ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿದ್ದರಾಜು ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು   

ನಂಜನಗೂಡು: ಮೈಸೂರು - ನಂಜನಗೂಡು ಮಾರ್ಗದ ಸುಜಾತಪುರಂ ಬಳಿ ನಿರ್ಮಿಸಿರುವ ‌ರೈಲ್ವೆ ಮೇಲ್ಸೆತುವೆಗೆ ಮಾಜಿ ಸಂಸದ, ದಿವಂಗತ ಶ್ರೀನಿವಾಸ್ ಪ್ರಸಾದ್ ಅವರ ಹೆಸರಿಡಬೇಕು ಎಂದು ಆಗ್ರಹಿಸಿ ನಗರಸಭೆ ಅಧ್ಯಕ್ಷ ಹಾಗೂ ಆಯುಕ್ತರಿಗೆ ಶುಕ್ರವಾರ ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿದ್ದರಾಜು ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.

‘2021-22ರಲ್ಲಿ ಶ್ರೀನಿವಾಸ ಪ್ರಸಾದ್ ಅವರು ಸಂಸದರಾಗಿದ್ದಾಗ ಅವರ ಶ್ರಮದಿಂದ ಕೇಂದ್ರ ಸರ್ಕಾರದಿಂದ ಅನುದಾನ ತಂದು ₹80 ಕೋಟಿ ವೆಚ್ಚದ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು, 2023ಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಸಂಪೂರ್ಣವಾಗಿ, ವಿದ್ಯುತ್ ಸಂಪರ್ಕ ನೀಡುವ ಕೆಲಸ ಬಾಕಿ ಉಳಿದಿತ್ತು, ಗಣ್ಯರನ್ನು ಆಹ್ವಾನಿಸಿ ಉದ್ಘಾಟನೆ ನಡೆಸುವುದು ವಿಳಂಬವಾಗುವುದರಿಂದ  ಶ್ರೀನಿವಾಸ ಪ್ರಸಾದ್ ಹಾಗೂ ಅಂದಿನ ಶಾಸಕ ಹರ್ಷವರ್ಧನ್ ಆಶಯದಂತೆ ಸಾರ್ವಜನಿಕರ ಬಳಕೆಗೆ ತೆರೆಯಲಾಯಿತು’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿದ್ದರಾಜು ತಿಳಿಸಿದರು.

‘ಪ್ರಸ್ತುತ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತವಿದ್ದು, ರೈಲ್ವೆ ಮೇಲ್ಸೇತುವೆಗೆ ಆರ್.ಧ್ರುವನಾರಾಯಣ ಹೆಸರು ಇಡಲು ನಿರ್ಣಯ ಕೈಗೊಳ್ಳಲಾಗಿದೆ, ನಗರಕ್ಕೆ ತುರ್ತು ಅಗತ್ಯವಾಗಿದ್ದ ಸೇತುವೆ ನಿರ್ಮಾಣಕ್ಕೆ ಶ್ರೀನಿವಾಸ ಪ್ರಸಾದ್ ಅವರು ಶ್ರಮಪಟ್ಟಿದ್ದಾರೆ, ಶಾಸಕ ದರ್ಶನ್ ಧ್ರುವನಾರಾಯಣ ಅವರು ಮೈಸೂರು-ಚಾಮರಾಜನಗರ ಜಿಲ್ಲೆಗೆ ಶ್ರೀನಿವಾಸ ಪ್ರಸಾದ್ ನೀಡಿರುವ ಕೊಡುಗೆ, ಹಲವು ಮಂದಿ ಎರಡನೆ ಪಂತಿಯ ನಾಯಕರನ್ನು ಬೆಳೆಸಿದ ಅವರ ಮುತ್ಸದ್ಧಿತನವನ್ನು ಪರಿಗಣಿಸಿ, ನಮ್ಮ ಭಾಗದಲ್ಲಿ 5 ಬಾರಿ ಸಂಸದರಾಗಿ ಸೇವೆ ಸಲ್ಲಿಸಿರುವ ಶ್ರೀನಿವಾಸ ಪ್ರಸಾದ್ ಅವರ ಹೆಸರನ್ನು ರೈಲ್ವೆ ಮೇಲ್ಸೇತುವೆಗೆ ಇಡುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಯಾಗಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಿಕ್ಕ ರಂಗನಾಯಕ, ನಗರಸಭಾ ಸದಸ್ಯರಾದ ಮಹದೇವ ಪ್ರಸಾದ್, ಮಹೇಶ್ ಅತ್ತಿಖಾನೆ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆಂಡಗಣ್ಣಪ್ಪ, ಚಂದ್ರು, ರಾಜು, ಮಂಜು, ಪರಶಿವಮೂರ್ತಿ, ಬದನವಾಳು ರಾಮು, ಕೃಷ್ಣಪ್ಪ, ಬಾಲರಾಜ್, ಮಸಗೆ ರಾಜು, ಹೆಮ್ಮರಗಾಲ ಸೋಮಣ್ಣ, ಮಂಡ್ಯ ಮಹದೇವು, ನಿಧಿ ಸುರೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.