ADVERTISEMENT

ಕ್ಷೇತ್ರಕ್ಕೆ ಬಂದಿರುವುದು ಜನಸೇವೆಗೆ: ಜೆಡಿಎಸ್ ಮುಖಂಡ ಎಲ್.ಆರ್.ಶಿವರಾಮೇಗೌಡ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 5:23 IST
Last Updated 29 ನವೆಂಬರ್ 2020, 5:23 IST
ಶಿವರಾಮೇಗೌಡ
ಶಿವರಾಮೇಗೌಡ   

ನಾಗಮಂಗಲ: ‘ನಾನು ಕ್ಷೇತ್ರಕ್ಕೆ ಮರಳಿ ಬಂದಿರುವುದು ರಾಜಕೀಯಮಾಡುವ ಉದ್ದೇಶದಿಂದ ಅಲ್ಲ. ತಾಲ್ಲೂಕಿನ ಜನರ ಸೇವೆ ಮಾಡಲು ಮಾತ್ರ’ ಎಂದು ಜೆಡಿಎಸ್ ಮುಖಂಡ ಎಲ್.ಆರ್.ಶಿವರಾಮೇಗೌಡ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಸಕ ಸುರೇಶ್ ಗೌಡ ಅವರು ನಾನು ಯಾವ ಪಕ್ಷದಲ್ಲಿದ್ದೇನೆ ಎಂದು ಗೊತ್ತಿಲ್ಲ ಎಂದು ಹೇಳಿರುವುದಕ್ಕೆ ಸಂಬಂಧಿಸಿ ನಾನು ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರ ಭಾವಚಿತ್ರವನ್ನು ಕಚೇರಿಯ ಮುಂದೆ ಹಾಕಿದ್ದೇನೆ. ಜನ ಸೇವೆಯಲ್ಲಿ ತೊಡಗಿ ದ್ದೇನೆ. ಅದನ್ನು ನೋಡಿದರೆ ನಾನು ಯಾವ ಪಕ್ಷದಲ್ಲಿದ್ದೇನೆ ಎಂದು ಅವರಿಗೆ ತಿಳಿಯುತ್ತದೆ. ಶಾಸಕ ಸುರೇಶ್ ಗೌಡ ಅವರಿಗೆ ಈಗ ಅಪ್ಪಾಜಿಗೌಡ ರಾಗಲೀ, ಶಿವ ರಾಮೇಗೌಡ ರಾಗಲೀ‌ ಮತ್ತು ಮೂಲ ಜೆಡಿಎಸ್‌ನ ವರಾಗಲೀ ಕಣ್ಣಿಗೆ ಬೀಳುತ್ತಿಲ್ಲ’ ಎಂದರು.

ಜೆಡಿಎಸ್ ಬಗ್ಗೆ ಮಾತನಾಡಲು ಎಚ್.ವಿಶ್ವನಾಥ್ ಯಾರು?: ಎಚ್‌.ಡಿ.ಕುಮಾರಸ್ವಾಮಿ ಅವರು ತೆಗೆದುಕೊಳ್ಳುತ್ತಿರುವ ಅವಸರದ ತೀರ್ಮಾನಗಳಿಂದ ಜೆಡಿಎಸ್ ಪಕ್ಷ ಕುಸಿಯುತ್ತಿದೆ ಎಂದು ನಾಗಮಂಗಲಕ್ಕೆ ಈಚೆಗೆ ಭೇಟಿ ನೀಡಿದ್ದ ಎಚ್.ವಿಶ್ವನಾಥ್ ಹೇಳಿದ್ದರು. ವಿಶ್ವನಾಥ್ ಅವರಿಗೆ ಪಕ್ಷದಲ್ಲಿ ಸ್ಥಾನ, ಅಧಿಕಾರ ಕೊಟ್ಟಿದ್ದರು. ಈಗ ಪಕ್ಷ ಬಿಟ್ಟು ಹೋಗಿದ್ದು, ನಮ್ಮ ಪಕ್ಷದ ವಿಚಾರ ಮಾತನಾಡಲು ಅವರು ಯಾರು?. ಜೆಡಿಎಸ್ ಪಕ್ಷದ ಬಗ್ಗೆ ಅವರು ಚಿಂತಿಸುವ ಅವಶ್ಯಕತೆಯಿಲ್ಲ ಎಂದರು.

ADVERTISEMENT

ಪುಟ್ಟಸ್ವಾಮಿಗೌಡ, ವೆಂಕಟೇಶ್, ಚನ್ನಪ್ಪ, ರಾಮೇಗೌಡ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.