ADVERTISEMENT

ಚಾಮುಂಡಿ ಬೆಟ್ಟ | ಆಷಾಢ ಶುಕ್ರವಾರ: ₹2 ಸಾವಿರ ಟಿಕೆಟ್‌ ರದ್ದುಪಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 13:59 IST
Last Updated 3 ಜುಲೈ 2025, 13:59 IST
ಚಾಮುಂಡಿ ಬೆಟ್ಟ
ಚಾಮುಂಡಿ ಬೆಟ್ಟ   

ಮೈಸೂರು: ‘ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದಂದು ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾದಿಗಳಿಗಾಗಿ ನಿಗದಿಗೊಳಿಸಿರುವ ₹2 ಸಾವಿರ ಟಿಕೆಟ್‌ ವ್ಯವಸ್ಥೆ ರದ್ದುಗೊಳಿಸಬೇಕು’ ಎಂದು ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ)ದ ರಾಜ್ಯಾಧ್ಯಕ್ಷ ಡಾ.ಬಿ. ಶಿವಣ್ಣ ಆಗ್ರಹಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಾಮುಂಡಿಬೆಟ್ಟಕ್ಕೆ ಆಷಾಢ ಮಾಸದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ವೇಳೆ ದರ್ಶನಕ್ಕೆ ತಾರತಮ್ಯ ಮಾಡುತ್ತಿರುವುದು ಖಂಡನೀಯ. ಬೆಟ್ಟಕ್ಕೆ ಬರುವವರಿಗೆ ಸರಿಯಾದ ಮೂಲ ಸೌಕರ್ಯ ಇಲ್ಲ. ಶೌಚಾಲಯ ವ್ಯವಸ್ಥೆಯೂ ಅಸಮರ್ಪಕವಾಗಿದೆ. ದರ್ಶನಕ್ಕೆ ₹2 ಸಾವಿರ ಶುಲ್ಕ ನಿಗದಿಗೊಳಿಸಿದ ಇತಿಹಾಸವೇ ಇಲ್ಲ. ವಿಐಪಿಗಳಿರಲೀ, ಜನಸಾಮಾನ್ಯರಿರಲೀ ಎಲ್ಲರಿಗೂ ದರ್ಶನಾವಕಾಶ ಒದಗಿಸಬೇಕಾದುದು ದೇವಸ್ಥಾನದ ಆಡಳಿತ ಮಂಡಳಿ ಕರ್ತವ್ಯ’ ಎಂದರು.

ಸಂಘಟನೆ ಪದಾಧಿಕಾರಿಗಳಾದ ನಾಗಸುಂದರ್, ಕುಮಾರ್, ಮಂಜುನಾಥ್, ಭಾಗ್ಯಮ್ಮ ಹಾಗೂ ಸ್ವಾಮಿ ನಾಯಕ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.