ADVERTISEMENT

ಮೈಸೂರು | 'ಕೇಂದ್ರ ಬಜೆಟ್‌: ಕಾಂಗ್ರೆಸ್ ಆರೋಪ ಸಲ್ಲ'

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 15:42 IST
Last Updated 27 ಜುಲೈ 2024, 15:42 IST

ಮೈಸೂರು: ‘ಕೇಂದ್ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಅನ್ಯಾಯ ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪ ಸರಿಯಲ್ಲ’ ಎಂದು ಜೆಡಿಎಸ್ ರಾಜ್ಯ ವಕ್ತಾರ ಎನ್.ಆರ್.ರವಿಚಂದ್ರೇಗೌಡ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾಸ್ತವವಾಗಿ ಈಗಾಗಲೇ ಕೇಂದ್ರ ಸರ್ಕಾರ ರೈಲ್ವೆ ವಲಯಕ್ಕೆ ₹7,559 ಕೋಟಿ ನೀಡಿದೆ. ಹೊಸದಾಗಿ ರಚನೆ ಆಗಿರುವ ಕಾರಣ ಆಂಧ್ರ, ತೆಲಂಗಾಣ ಮೊದಲಾದ ರಾಜ್ಯಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ನೀಡಲಾಗಿದೆ. ಇದನ್ನು ಟೀಕಿಸುವುದು ಸಲ್ಲ. ಇನ್ನು ಕಳೆದ ಬಾರಿಯ 2013, 2018ರ ಅವಧಿಯಲ್ಲಿ ₹8,480 ಕೋಟಿ ಖರ್ಚು ಮಾಡಿ ಮೈಸೂರು- ಬೆಂಗಳೂರು ಹೆದ್ದಾರಿ ಬಿಡುಗಡೆಗೊಳಿಸಿದೆ. ಈ ರೀತಿ ಕೇಂದ್ರ ಸರ್ಕಾರ ಇಲ್ಲಿನ ಅಭಿವೃದ್ಧಿಗೆ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಹಣ ನೀಡಿದೆ. ಇದನ್ನು ಗಮನಿಸಬೇಕು’ ಎಂದರು.

‘ಮುಡಾ ಭ್ರಷ್ಟಾಚಾರ ಕುರಿತಂತೆ ಸಿ.ಎಂ ಸಿದ್ದರಾಮಯ್ಯ, ವಿಧಾನ ಸಭೆಯಲ್ಲಿ ವಿರೋಧ ಪಕ್ಷಗಳು ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಲಿಲ್ಲ. ₹5 ಸಾವಿರ ಕೋಟಿ ಮೀರಿದ ಭ್ರಷ್ಟಾಚಾರದ ತನಿಖೆ ಸಿಬಿಐಗೆ ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿ ಬೇನಾಮಿ ಹೆಸರಿನಲ್ಲಿ ನಿವೇಶನ ಪಡೆದಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಅಲ್ಲದೆ, ಗೃಹಲಕ್ಷ್ಮೀ ಯೋಜನೆ ಕಾರಣ ರಾಜ್ಯ ಸರ್ಕಾರ ದಿವಾಳಿಯಾಗಿದೆ’ ಎಂದು ಟೀಕಿಸಿದರು.

ADVERTISEMENT

ಮಾಜಿ ಮೇಯರ್ ರವಿಕುಮಾರ್, ಆರ್.ಮುದ್ದುರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.