ADVERTISEMENT

ರೈಲ್ವೆ ವಸ್ತುಸಂಗ್ರಹಾಲಯದಲ್ಲಿ ‘ಕಾಮನ್‌ ಮ್ಯಾನ್’

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 11:46 IST
Last Updated 1 ಅಕ್ಟೋಬರ್ 2020, 11:46 IST
ರೈಲ್ವೆ ವಸ್ತುಸಂಗ್ರಹಾಲಯದಲ್ಲಿ ಸ್ಥಾಪಿಸಿರುವ ‘ಕಾಮನ್‌ ಮ್ಯಾನ್’ ಶಿಲ್ಪ
ರೈಲ್ವೆ ವಸ್ತುಸಂಗ್ರಹಾಲಯದಲ್ಲಿ ಸ್ಥಾಪಿಸಿರುವ ‘ಕಾಮನ್‌ ಮ್ಯಾನ್’ ಶಿಲ್ಪ   

ಮೈಸೂರು: ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರು ಸೃಷ್ಟಿಸಿದ್ದ ವಿಡಂಬನ ಚಿತ್ರಪಾತ್ರ ‘ಕಾಮನ್ ಮ್ಯಾನ್’ನ (ಜನಸಾಮಾನ್ಯ) ಶಿಲ್ಪವನ್ನು ರೈಲ್ವೆ ವಸ್ತುಸಂಗ್ರಹಾಲಯದಲ್ಲಿ ಸ್ಥಾಪಿಸಲಾಗಿದ್ದು, ಗಮನ ಸೆಳೆಯುತ್ತಿದೆ.

ಮೈಸೂರಿನಲ್ಲಿ ಜನಿಸಿದ್ದ ಲಕ್ಷ್ಮಣ್, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದರು. ಅವರು‘ಕಾಮನ್ ಮ್ಯಾನ್’ಪಾತ್ರವನ್ನು 1951 ರಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದರು. ಅವರ ವ್ಯಂಗ್ಯ ಚಿತ್ರಗಳಲ್ಲಿ ಕಾಣಿಸಿಕೊಂಡ ಈ ಪಾತ್ರ ಎಲ್ಲಾ ವಯಸ್ಸಿನ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ.

ಭಾರತದಲ್ಲಿ ರೈಲ್ವೆಯು ಜನಸಾಮಾನ್ಯರ ಆಶಯ ಮತ್ತು ಆಕಾಂಕ್ಷೆಗಳಿಗಾಗಿಯೇ ಇದೆ. ಸಾಮಾನ್ಯ ಜನರೊಂದಿಗೆ ರೈಲ್ವೆಯ ಸಂಬಂಧವನ್ನು ಬಿಂಬಿಸುವ ಉದ್ದೇಶದೊಂದಿಗೆ ಈ ಶಿಲ್ಪವನ್ನು ಸಂಗ್ರಹಾಲಯದಲ್ಲಿ ಸ್ಥಾಪಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕರಾದ ಅಪರ್ಣಾ ಗರ್ಗ್ ಹೇಳಿದ್ದಾರೆ.

ADVERTISEMENT

ಮೈಸೂರು ಮೂಲದ ಕಲಾವಿದ ಅರುಣ್ ಯೋಗಿರಾಜ್ ಅವರು ಈ ಶಿಲ್ಪವನ್ನು ಕೆತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.