ADVERTISEMENT

ಹೋಟೆಲ್‌ಗಳಿಗೆ ಪಾರ್ಸಲ್ ನೀಡಲು ಅವಕಾಶ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 5:32 IST
Last Updated 30 ಮಾರ್ಚ್ 2020, 5:32 IST
   

ಮೈಸೂರು: ನಗರದಲ್ಲಿ ಸೋಮವಾರ ಬೆಳಿಗ್ಗೆ ಕೆಲವೊಂದು ಹೋಟೆಲ್ ಗಳು ತೆರೆದಿದ್ದು, ಪಾರ್ಸಲ್ ನೀಡಲು ಮಾತ್ರ ಅವಕಾಶ ನೀಡಲಾಗಿದೆ.

ಮಾಂಸದಂಗಡಿ ತೆರೆಯಲು ಭಾನುವಾರದಿಂದಲೆ ಅನುಮತಿ ನೀಡಲಾಗಿದೆ. ನಿತ್ಯ ಇವುಗಳು ತೆರೆದಿದ್ದು, ಸಾರ್ವಜನಿಕರು ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಹಾಸ್ಟೆಲ್, ಪಿ.ಜಿ ಸೇರಿದಂತೆ ಎಲ್ಲ ಬಗೆಯ ವಿದ್ಯಾರ್ಥಿ ನಿಲಯಗಳು ತಮ್ಮಲ್ಲಿರುವವರಿಗೆ ಆಹಾರ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸೂಚನೆ ನೀಡಿದ್ದಾರೆ.

ADVERTISEMENT

ಇಂದಿನಿಂದ ಜನರ ಮನೆ ಬಾಗಿಲಿಗೆ ರಿಯಾಯಿತಿ ದರದಲ್ಲಿ ದಿನಸಿ ಒದಗಿಸುವ ಕಾರ್ಯಕ್ಕೆ ಪಾಲಿಕೆ ಕೈ ಹಾಕಿದ್ದು, ಪ್ರಾಯೋಗಿಕವಾಗಿ 3 ವಾರ್ಡ್ ನಲ್ಲಿ ಈ ಯೋಜನೆ ಜಾರಿಯಾಗಲಿದೆ ಎಂದು ಪಾಲಿಕೆ ಆಯುಕ್ತ ಗುರುದತ್ ಹೆಗಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.