ADVERTISEMENT

ಪಾಲಿಕೆಯಿಂದ ‘ಇ– ತ್ಯಾಜ್ಯ’ ಸಂಗ್ರಹ ಕಾರ್ಯ ಆರಂಭ

ಕಸದ ಬುಟ್ಟಿಗೆ ವಿದಾಯ ಹೇಳಲು ಕರೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 14:33 IST
Last Updated 17 ಸೆಪ್ಟೆಂಬರ್ 2019, 14:33 IST
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಮೈಸೂರಿನ ಪಾಲಿಕೆಯಲ್ಲಿ ಮಂಗಳವಾರ ನಡೆದ ‘ಭಾರತ ವಿಕಾಸ ದಿನ’ದ ಅಂಗವಾಗಿ ‘ಇ– ಕಸದಿಂದ ಮುಕ್ತ, ಹಸಿರು ಮೈಸೂರಿನತ್ತ’ ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ.ತೇಜಸ್ವಿನಿ ಅನಂತಕುಮಾರ್ ‘ಇ– ತ್ಯಾಜ್ಯ’ವನ್ನು ಕಸದ ಲಾರಿಗೆ ಹಾಕಿದರು. ಸಚಿವ ವಿ.ಸೋಮಣ್ಣ, ಶಾಸಕ ಎಸ್.ಎ.ರಾಮದಾಸ್ ಇದ್ದಾರೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಮೈಸೂರಿನ ಪಾಲಿಕೆಯಲ್ಲಿ ಮಂಗಳವಾರ ನಡೆದ ‘ಭಾರತ ವಿಕಾಸ ದಿನ’ದ ಅಂಗವಾಗಿ ‘ಇ– ಕಸದಿಂದ ಮುಕ್ತ, ಹಸಿರು ಮೈಸೂರಿನತ್ತ’ ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ.ತೇಜಸ್ವಿನಿ ಅನಂತಕುಮಾರ್ ‘ಇ– ತ್ಯಾಜ್ಯ’ವನ್ನು ಕಸದ ಲಾರಿಗೆ ಹಾಕಿದರು. ಸಚಿವ ವಿ.ಸೋಮಣ್ಣ, ಶಾಸಕ ಎಸ್.ಎ.ರಾಮದಾಸ್ ಇದ್ದಾರೆ   

ಮೈಸೂರು: ಅಡುಗೆ ಮನೆಯಲ್ಲಿ ಕಸದ ಬುಟ್ಟಿಗೆ ವಿದಾಯ ಹೇಳಿದರೆ ಅರ್ಧದಷ್ಟು ಕಸದಿಂದ ಮುಕ್ತಿ ಪಡೆಯಬಹುದು ಎಂದು ಅದಮ್ಯ ಚೇತನ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ.ತೇಜಸ್ವಿನಿ ಅನಂತಕುಮಾರ್ ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಇಲ್ಲಿ ಪಾಲಿಕೆಯಲ್ಲಿ ಮಂಗಳವಾರ ನಡೆದ ‘ಭಾರತ ವಿಕಾಸ ದಿನ’ದ ಅಂಗವಾಗಿ ‘ಇ– ಕಸದಿಂದ ಮುಕ್ತ, ಹಸಿರು ಮೈಸೂರಿನತ್ತ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‌

ಅಡುಗೆ ಮನೆಯಲ್ಲಿ ಕಸದ ಬುಟ್ಟಿ ಇರಲೇಬಾರದು. ಬೆಂಗಳೂರಿನಲ್ಲಿ ಟ್ರಸ್ಟ್‌ ವತಿಯಿಂದ ಸುಮಾರು 50 ಸಾವಿರ ಮಂದಿಗೆ ಅಡುಗೆ ಮಾಡಲಾಗುತ್ತದೆ. ಇಲ್ಲಿನ ಅಡುಗೆ ಮನೆಯು ಶೂನ್ಯ ಕಸ ಉತ್ಪತ್ತಿ ಅಡುಗೆ ಮನೆಗಳು ಎನಿಸಿವೆ ಎಂದು ಹೇಳಿದರು.‌

ADVERTISEMENT

‘ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ಎಲ್ಲ ತ್ಯಾಜ್ಯವನ್ನು ಸುಲಭವಾಗಿ ಗೊಬ್ಬರವಾಗಿ ಪರಿವರ್ತಿಸಬಹುದು. ಅದನ್ನು ನಮ್ಮ ತೋಟಗಳಿಗೆ ಬಳಸಬಹುದು. ಈ ರೀತಿ ಹಸಿ ಕಸದಿಂದ ನಾವೆಲ್ಲರೂ ಮುಕ್ತಿ ಹೊಂದಬಹುದು’ ಎಂದು ತಿಳಿಸಿದರು.‌

ಮತ್ತೊಂದು ಕಡೆ ‘ಇ– ತ್ಯಾಜ್ಯ’ದಿಂದ ಮುಕ್ತಿ ಹೊಂದುವುದು ಹೇಗೆ ಎಂಬ ಪ್ರಶ್ನೆಗೆ ಪಾಲಿಕೆ ಈಗ ಉತ್ತರ ಕಂಡುಕೊಂಡಿದೆ. ಎಲೆಕ್ಟ್ರಾನಿಕ್ ತ್ಯಾಜ್ಯವಾದ ‘ಪಿಸಿಬಿ’ಯಲ್ಲಿ ಲೆಡ್ ಮತ್ತು ಬ್ರೋಮಿಯಂ ಇರುತ್ತದೆ. ಇದು ಮಣ್ಣು ಸೇರಿ, ಆಹಾರ ಧಾನ್ಯಗಳ ಮೂಲಕ ದೇಹ ಸೇರುತ್ತಿದೆ. ಮೂತ್ರಪಿಂಡ ಸಮಸ್ಯೆಗಳಿಗೆ, ಕ್ಯಾನ್ಸರ್‌ಗೆ ಇದು ಪ್ರಧಾನ ಕಾರಣ ಎನಿಸಿದೆ ಎಂದು ಅವರು ವಿವರಿಸಿದರು.

ಜನರು ಇದರ ಅಪಾಯ ಮನಗಂಡು ಇ–ತ್ಯಾಜ್ಯವನ್ನು ಪಾಲಿಕೆ ರೂಪಿಸಿದ ನಿಯಮದನ್ವಯ ವಿಲೇವಾರಿ ಮಾಡಬೇಕು. ಆಗ ಸಮಾಜದ ಎಲ್ಲರೂ ಆರೋಗ್ಯವಾಗಿರಬಹುದು ಎಂದರು.

ಶಾಸಕ ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫಿ ಅಹಮದ್, ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಮುಡಾ ಆಯುಕ್ತ ಕಾಂತರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಾಂಡುರಂಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.