ADVERTISEMENT

ಕೋವಿಡ್‌: 240 ಹೊಸ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 6:55 IST
Last Updated 29 ಸೆಪ್ಟೆಂಬರ್ 2020, 6:55 IST
ಕೋವಿಡ್‌
ಕೋವಿಡ್‌   

ಮೈಸೂರು: ಜಿಲ್ಲೆಯಲ್ಲಿ ಸೋಮ ವಾರ240 ಮಂದಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಕೋವಿಡ್‌ ಬಾಧಿತರ ಸಂಖ್ಯೆ 33,540ಕ್ಕೇರಿದೆ.

ಕೊರೊನಾ ಸೋಂಕಿನಿಂದ 20 ಮಂದಿ ಚೇತರಿಸಿಕೊಂಡಿದ್ದು, ಇದುವರೆಗೆ 26,121 ಗುಣಮುಖರಾಗಿದ್ದಾರೆ.

ಮನೆಯಲ್ಲಿ ಐಸೊಲೇಷನ್‌ ಆದವರೂ ಸೇರಿದಂತೆ ಜಿಲ್ಲಾ ಕೋವಿಡ್‌ ಆಸ್ಪತ್ರೆ, ಕೋವಿಡ್‌ ಚಿಕಿತ್ಸಾ ಕೇಂದ್ರ, ಕೋವಿಡ್‌ ಕೇರ್‌ ಕೇಂದ್ರ, ಖಾಸಗಿ ಕೋವಿಡ್‌ ಕೇರ್‌ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಒಟ್ಟು 6,695 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

55 ಹಾಗೂ 40 ವರ್ಷದ ಪುರುಷರು ಮೃತಪಟ್ಟಿದ್ದು, ಇದುವರೆಗೆ ಸೋಂಕಿನಿಂದ ಮೃತರಾದವರ ಒಟ್ಟು ಸಂಖ್ಯೆ 724ಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.