ಸಕಲೇಶಪುರ: ಇಲ್ಲಿಯ ಆಜಾದ್ ರಸ್ತೆ ಹಾಗೂ ಹೊಳೆ ಬೀದಿಯ ಹೇಮಾವತಿ ದಡದಲ್ಲಿ ಹತ್ತಾರು ಕಾಗೆಗಳು ಮಂಗಳವಾರ ಮೃತಪಟ್ಟಿವೆ. ವಿಷಕಾರಿ ತ್ಯಾಜ್ಯ ತಿಂದು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಹೊಳೆಯ ದಡದಲ್ಲಿರುವ ಸ್ಮಶಾನದಲ್ಲಿ ತ್ಯಾಜ್ಯದ ರಾಶಿ ಇದ್ದು ದುರ್ವಾಸನೆ ಹೊಮ್ಮುತ್ತಿದೆ. ಕಳೆದೊಂದು ವಾರದಿಂದ ಕಾಗೆಗಳು ಅಲ್ಲಲ್ಲಿ ಸತ್ತು ಬೀಳುತ್ತಿದ್ದವು. ಮಂಗಳವಾರ ಒಂದೇ ಕಡೆ ಸುಮಾರು ಹತ್ತು ಕಾಗೆಗಳು ಹಾರಲಾಗದೇ ನೆಲದಲ್ಲಿ ಒದ್ದಾಡುತ್ತಿದ್ದವು.
‘ಕಾಗೆಗಳು ಸಾಮೂಹಿಕವಾಗಿ ಸಾವನ್ನಪ್ಪುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪಶು ಇಲಾಖೆ ಅಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಿ ಕಾರಣ ಪತ್ತೆಹಚ್ಚಲಾಗುವುದು. ಕಸ ವಿಲೆವಾರಿ ಸಮಸ್ಯೆ ಕಳೆದ ಮೂರು ವರ್ಷಗಳಿಂದ ಇರುವುದು ಸತ್ಯ. ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಯಲಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.