ADVERTISEMENT

ಸಾಲಿಗ್ರಾಮ | ಸಿಆರ್‌ಪಿಎಫ್ ಯೋಧ ಹೃದಯಘಾತದಿಂದ ಸಾವು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 14:31 IST
Last Updated 14 ಸೆಪ್ಟೆಂಬರ್ 2024, 14:31 IST
ಸಾಲಿಗ್ರಾಮ ಸಮೀಪ ಮೂಡಲಬೀಡು ಗ್ರಾಮದ ಯೋಧ ಹೃದಯಾಘಾತದಿಂದ ಮೃತ ಪಟ್ಟಿರುವುದು
ಸಾಲಿಗ್ರಾಮ ಸಮೀಪ ಮೂಡಲಬೀಡು ಗ್ರಾಮದ ಯೋಧ ಹೃದಯಾಘಾತದಿಂದ ಮೃತ ಪಟ್ಟಿರುವುದು   

ಸಾಲಿಗ್ರಾಮ: ರಜೆ ಮೇಲೆ ಮನೆಗೆ ಬಂದಿದ್ದ ಸಿಆರ್‌ಪಿಎಫ್ ಯೋಧ ಸಾಲಿಗ್ರಾಮ ತಾಲ್ಲೂಕಿನ ಮೂಡಲಬೀಡು ಗ್ರಾಮದ ರವಿಶಂಕರ್ ಎಂ.ಆರ್ (39) ಹೃದಯಘಾತದಿಂದ ಮೃತ ಪಟ್ಟಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಜಮ್ಮು ರಾಜ್ಯದ ಗಡಿಭಾಗದಲ್ಲಿ ಸಿಆರ್‌ಪಿಎಫ್‌ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿಶಂಕರ್ ಕಳೆದ ತಿಂಗಳು ರಜೆ ಪಡೆದು ಕೊಂಡು ಸ್ವಗ್ರಾಮಕ್ಕೆ ಬಂದಿದ್ದರು. ಯೋಧನ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಹೊಳೆನರಸೀಪುರ ಪಟ್ಟಣದಲ್ಲಿ ವಾಸವಿದ್ದ ಮೇರೆಗೆ ಮಕ್ಕಳು ಮತ್ತು ಪತ್ನಿಯನ್ನು ನೋಡಿ ಕೊಂಡು ಶುಕ್ರವಾರ ಸಂಜೆ ಜಮ್ಮುವಿಗೆ ತೆರಳುವಾಗ ಎದೆ ನೋವು ಕಾಣಿಸಿ ಕೊಂಡಿದೆ ತಕ್ಷಣವೇ ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿದಾಗ ವೈದ್ಯರು ಹೊರ ರೋಗಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.

ಯೋಧ ತನ್ನ ಮನೆಗೆ ಹೋಗಿ ಕುಟುಂಬದ ಸದಸ್ಯರಿಗೆ ವಿಷಯ ತಿಳಿಸಿ ವಿಶ್ರಾಂತಿ ಪಡೆದು ಕೊಳ್ಳುವುದಾಗಿ ಹೇಳಿ ಮಲಗಿದ ಸ್ವಲ್ಪ ಸಮಯದಲ್ಲೇ ಮತ್ತೆ ಎದೆ ನೋವು ಕಾಣಿಸಿ ಕೊಂಡಿದೆ ಕುಟುಂಬದ ಸದಸ್ಯರು ಮತ್ತೆ ಹೊಳೆನರಸೀಪುರ ಆಸ್ಪತ್ರೆಗೆ ಕರೆದು ಕೊಂಡು ಬಂದು ಚಿಕಿತ್ಸೆ ಕೊಡಿಸುವಷ್ಟರಲ್ಲಿ ಯೋಧ ರವಿಶಂಕರ್ ಮೃತ ಪಟ್ಟರು ಎಂದು ಕುಟುಂಬದ ಸದಸ್ಯರು ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು. ಮೃತ ಯೋಧ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ADVERTISEMENT

ಶನಿವಾರ ಬೆಳಿಗ್ಗೆ ಯೋಧನ ಮರಣೋತ್ತರ ಪರೀಕ್ಷೆ ಮಾಡಲು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರಿಗೆ ಕುಟುಂಬದ ಸದಸ್ಯರು ಮನವಿ ಮಾಡಿದರು ಮರಣೋ ತ್ತರ ಪರೀಕ್ಷೆ ಮಾಡಲು ಉದಾಸೀನ ಮಾಡುತ್ತಿರುವುದನ್ನು ಕೆ.ಆರ್.ನಗರ ಕ್ಷೇತ್ರದ ಶಾಸಕ ಡಿ.ರವಿಶಂಕರ್ ಅವರಿಗೆ ತಿಳಿಸಿದ ಮೇರೆಗೆ ಶಾಸಕರು ತಕ್ಷಣವೇ ಹೊಳೆ ನರಸೀ ಪುರಕ್ಕೆ ಹೋಗಿ ವೈದ್ಯರಿಗೆ ತರಾಟೆಗೆ ತೆಗೆದು ಕೊಳ್ಳುತ್ತಿದ್ದಂತೆ ಶನಿವಾರ ಮಧ್ಯಾಹ್ನ ಸುಮಾರ 2 ಗಂಟೆ ನಂತರ ಮರಣೋತ್ತರ ಪರೀಕ್ಷೆ ಮಾಡಿ ಪಾರ್ಥಿವ ಶರೀರವನ್ನು ಕುಟುಂಬದ ಸದಸ್ಯರಿಗೆ ನೀಡಿದರು ಎಂದು ಯೋಧನ ಸಂಬಂಧಿ ಸೋಮಶೇಖರ್ ಪ್ರಜಾವಾಣಿಗೆ ತಿಳಿಸಿದರು.

ಯೋಧನ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತಂದು ಸಿಆರ್‌ಪಿಏಫ್ ತಂಡ ಅಂತಿಮ ನಮನ ಸಲ್ಲಿಸಿದ ನಂತರ ಧಾರ್ಮಿಕ ವಿಧಿ ವಿಧಾನದಂತೆ ಯೋಧನ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ನಡೆಯಿತು.

ಸಾಲಿಗ್ರಾಮ ಸಮೀಪ ಮೂಡಲಬೀಡು ಗ್ರಾಮದ ಯೋಧ ಹೃದಯಾಘಾತದಿಂದ ಮೃತ ಪಟ್ಟಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.