ADVERTISEMENT

ಸಿ.ಟಿ.ರವಿ ಕುಡುಕ, ವ್ಯಭಿಚಾರಿ– ಧ್ರುವನಾರಾಯಣ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 1:00 IST
Last Updated 15 ಆಗಸ್ಟ್ 2021, 1:00 IST
ಆರ್. ಧ್ರುವನಾರಾಯಣ
ಆರ್. ಧ್ರುವನಾರಾಯಣ   

ಮೈಸೂರು: ‘ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕುಡುಕ ಮತ್ತು ವ್ಯಭಿಚಾರಿ. 2019ರ ಫೆಬ್ರುವರಿಯಲ್ಲಿ ಪಾನಮತ್ತರಾಗಿ ಇಬ್ಬರ ಸಾವಿಗೆ ಕಾರಣರಾಗಿದ್ದವರು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ದೂರಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರವಿ ಸಚಿವರಾಗಿದ್ದಾಗ ಕ್ಯಾಸಿನೋ ಕ್ಲಬ್‌ ತೆರೆಯಲು ಯತ್ನಿಸಿದ್ದರು. ಮದ್ಯಪಾನಿಯಾಗಿರುವ ಅವರಿಂದ ಬೇರೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅವರ ಬಾಯಿಂದ ಬರುವ ಪದಗಳನ್ನು ಕೇಳಲು ಹೇಸಿಗೆ ಅನ್ನಿಸುತ್ತದೆ. ಅವರದು ದುರಂಹಕಾರದ ಪರಮಾವಧಿ. ಅದು ಬಿಜೆಪಿ ಸಂಸ್ಕೃತಿ’ ಎಂದರು.

‘ಹಸಿರು ಕ್ರಾಂತಿಯ ಮೂಲಕ ಆಹಾರ ಸ್ವಾವಲಂಬನೆಗೆ ಕಾರಣರಾದವರು ಇಂದಿರಾಗಾಂಧಿ. ದೇಶದ ನಿಜವಾದ ಅನ್ನಪೂರ್ಣೇಶ್ವರಿ’ ಎಂದರು.

ADVERTISEMENT

‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಟಲ್‌ಜೀ ಆವಾಸ್ ಯೋಜನೆ ಸೇರಿದಂತೆ ಬಿಜೆಪಿ ಮುಖಂಡರ ಯಾವ ಹೆಸರನ್ನೂ ಬದಲಿಸಿಲ್ಲ. ಆದರೆ ಈಗ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಮರುನಾಮಕಾರಣದ ರಾಜಕಾರಣ ನಡೆದಿದೆ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.