ADVERTISEMENT

‘ದಸರೆ ಅನುದಾನ ಮಸಾಲೆ ದೋಸೆ ತಿನ್ನಲು ಅಲ್ಲ; ಕಲಾವಿದರಿಗೆ ನೀಡಲು’

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 3:14 IST
Last Updated 27 ಸೆಪ್ಟೆಂಬರ್ 2020, 3:14 IST
ಅಡ್ಡಂಡ ಸಿ.ಕಾರ್ಯಪ್ಪ
ಅಡ್ಡಂಡ ಸಿ.ಕಾರ್ಯಪ್ಪ   

ಮೈಸೂರು: ‘ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರ ಬಿಡುಗಡೆ ಮಾಡುವ ₹10 ಕೋಟಿ ಅನುದಾನವು ಮಸಾಲೆ ದೋಸೆ ತಿನ್ನುವುದಕ್ಕಲ್ಲ; ವಿವಿಧ ಕಾರ್ಯಕ್ರಮ ನೀಡಲಿರುವ ಕಲಾವಿದರಿಗೆ ನೀಡಲು’ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.

‘ನವರಾತ್ರಿ ಉತ್ಸವವೆಂದರೆ ರಂಗಾಯಣದ ಕಲಾವಿದರಿಗೆ ನವಯೌವ್ವನ ಬಂದಂತೆ. 9 ದಿನ ನಾಟಕ ಮಾಡಿ ಆಚರಿಸುವುದು ಸಂಪ್ರದಾಯ. ನಾಡಿನ 9 ಜನರನ್ನು ಸನ್ಮಾನ ಮಾಡುತ್ತಿದ್ದೆವು. ಆದರೆ, ಈ ಬಾರಿ ಅದನ್ನೆಲ್ಲಾ ಕೋವಿಡ್‌ ತಿಂದುಬಿಟ್ಟಿದೆ. ಈ ಬಾರಿ ನಾಟಕಕ್ಕಾಗಿ ತಾಲೀಮು ನಡೆಸಿದ್ದರೂ ಸೋಂಕಿನ ಕಾರಣ ಅವಕಾಶ ನೀಡಿಲ್ಲ’ ಎಂದರು.

‘ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ನೂರು ಮಂದಿಗೆ ಅವಕಾಶ ಕೊಟ್ಟಿದ್ದೀರಿ. ನಮಗೂ ಅವಕಾಶ ಕೊಡಿ. ರಂಗಾಯಣ ದಲ್ಲಿ ವಾರಾಂತ್ಯ ನಾಟಕ ಪ್ರದರ್ಶಿಸು ತ್ತೇವೆ’ ಎಂದು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.