ADVERTISEMENT

ಗುರುತು ಸಿಗದ 3 ಮೃತದೇಹಗಳು ಪತ್ತೆ

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ; ಇಬ್ಬರು ಹೊರ ರಾಜ್ಯದ ಯುವತಿಯರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 11:27 IST
Last Updated 23 ಮಾರ್ಚ್ 2019, 11:27 IST

ಮೈಸೂರು: ನಗರದಲ್ಲಿ ಗುರುತು ಸಿಗದ 2 ಮೃತದೇಹಗಳು ಹಾಗೂ ಪಾಂಡವಪುರದ ರೈಲು ನಿಲ್ದಾಣದಲ್ಲಿ ಒಂದು ಶವ ಪತ್ತೆಯಾಗಿವೆ. ಗುರುತು ಸಿಕ್ಕವರು ಸಮೀಪದ ಪೊಲೀಸ್ ಠಾಣೆ ಇಲ್ಲವೆ ನಿಯಂತ್ರಣ ಕಚೇರಿ ಸಂಖ್ಯೆ 100ಗೆ ಕರೆ ಮಾಡಿ ತಿಳಿಸಲು ಪೊಲೀಸರು ಕೋರಿದ್ದಾರೆ.

ಇಲ್ಲಿನ ಮೈಸೂರು– ನಂಜನಗೂಡು ರಸ್ತೆಯ ಕಾಮತ್ ಹೋಟೆಲ್ ಸಮೀಪ ಕೊಳೆತ ಸ್ಥಿತಿಯಲ್ಲಿ ಪುರುಷ ವ್ಯಕ್ತಿಯ ಮೃತದೇಹ ಶುಕ್ರವಾರ ದೊರಕಿದೆ. ಸಮೀಪದಲ್ಲೇ ವಿಷ ಕುಡಿದಿರುವ ಬಾಟಲ್ ಪತ್ತೆಯಾಗಿರುವುದರಿಂದ ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಬಿಳಿ ಅಂಗಿ ಮತ್ತು ಕಾಫಿ ಬಣ್ಣದ ಪ್ಯಾಂಟ್‌ ಧರಿಸಿರುವ ಇವರಿಗೆ 55ರಿಂದ 60 ವರ್ಷ ವಯಸ್ಸಿರಬಹುದು ಎಂದು ಅಂದಾಜು ಮಾಡಲಾಗಿದೆ. ಪ್ರಕರಣ ನಜರ್‌ಬಾದ್ ಠಾಣೆಯಲ್ಲಿ ದಾಖಲಾಗಿದೆ.

ಗುರುತು ಸಿಗದ ಮಹಿಳೆ ಸಾವು

ADVERTISEMENT

ಮೈಸೂರು: ಇಲ್ಲಿನ ರೈಲು ನಿಲ್ದಾಣದಲ್ಲಿ ಮಾರ್ಚ್ 12ರಂದು ಸುಮಾರು 80 ವರ್ಷದ ಮಹಿಳೆಯೊಬ್ಬರು ಅಸ್ವಸ್ಥರಾಗಿ ಬಿದ್ದಿದ್ದು, ಚಿಕಿತ್ಸೆಗೆ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಇವರು ಶುಕ್ರವಾರ ಮೃತಪಟ್ಟಿದ್ದಾರೆ. ಇವರ ಗುರುತು ಪತ್ತೆಯಾಗಿಲ್ಲ.

ಎತ್ತರ 5 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ಕೃಶವಾದ ಶರೀರ, ತಲೆಯಲ್ಲಿ 5 ಇಂಚು ಬಿಳಿ ಮತ್ತು ಕಪ್ಪು ಕೂದಲು, ಮೈಮೇಲೆ ಯಾವುದೇ ಬಟ್ಟೆಗಳು ಇಲ್ಲದ ಸ್ಥಿತಿಯಲ್ಲಿ ಇವರು ನಿಲ್ದಾಣದಲ್ಲಿ ಅಸ್ವಸ್ಥರಾಗಿ ಬಿದ್ದಿದ್ದರು.

ಮೃತದೇಹವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಗುರುತು ಪತ್ತೆಯಾದವರು ದೂ: 0821-2516579 ನ್ನು ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.

ಪಾಂಡವಪುರ ರೈಲು ನಿಲ್ದಾಣದಲ್ಲಿ ಶವ ಪತ್ತೆ

ಮೈಸೂರು: ಪಾಂಡವಪುರ ರೈಲು ನಿಲ್ದಾಣದ 1ನೇ ಪ್ಲಾಟ್‌ಫಾರಂನಲ್ಲಿ ಸುಮಾರು 40ರಿಂದ 45 ವರ್ಷದ ಪುರುಷ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಎತ್ತರ 5.6 ಅಡಿ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಸುಮಾರು 2 ಇಂಚು ಉದ್ದದ ಕಪು-ಬಿಳಿ ತಲೆ ಕೂದಲು, ಅರ್ಧ ಇಂಚು ಕುರುಚಲು ಮೀಸೆ ಬಿಟ್ಟಿದ್ದಾರೆ. ತಿಳಿ ಕೇಸರಿ ಬಣ್ಣದ ತುಂಬು ತೋಳಿನ ಶರ್ಟ್, ಕಾಫಿ ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾರೆ. ಮೃತದೇಹವನ್ನು ಕೆ.ಆರ್.ಆಸ್ಪತ್ರೆಯ ಶವಗಾರದಲ್ಲಿಡಲಾಗಿದೆ.

ಇವರ ವಾರಸುದಾರರು ಯಾರಾದರೂ ಇದ್ದಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂ: 0821-2516579ನ್ನು ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.