ADVERTISEMENT

ಮೈಸೂರು ದಸರಾ: ಖರ್ಚು ಬಹಿರಂಗಪಡಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 5:22 IST
Last Updated 4 ಜನವರಿ 2026, 5:22 IST
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು ಆನೆ ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ದೃಶ್ಯ 
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು ಆನೆ ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ದೃಶ್ಯ    

ಮೈಸೂರು: ‘ಕಳೆದ ವರ್ಷ ನಡೆದ ನಾಡಹಬ್ಬ ಮೈಸೂರು ದಸರಾದ ಖರ್ಚು–ವೆಚ್ಚದ ವಿವರವನ್ನು ಈವರೆಗೂ ಬಹಿರಂಗಪಡಿಸದಿರುವ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ನಡೆಯು ಹಲವು ಸಂಶಯಗಳಿಗೆ ಕಾರಣವಾಗಿದೆ’ ಎಂದು ಬಿಜೆಪಿ ಮುಖಂಡ ಡಾ.ಸುಶ್ರುತ್‌ ಗೌಡ ದೂರಿದ್ದಾರೆ. 

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘₹ 50 ಕೋಟಿಗೂ ಅಧಿಕ ಸಾರ್ವಜನಿಕರ ತೆರಿಗೆ ಹಣವನ್ನು ಖರ್ಚು ಮಾಡಿ ಉತ್ಸವ ನಡೆಸಲಾಗಿದೆ. ಇದರಲ್ಲಿ ಬಹಳಷ್ಟು ಅವ್ಯವಹಾರವಾಗಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿದೆ. ಇದನ್ನು ನಿವಾರಿಸಲು ತಕ್ಷಣ ಜಿಲ್ಲಾಡಳಿತ ದಸರಾ ಖರ್ಚು–ವೆಚ್ಚ ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ದಸರೆಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಮೊತ್ತವೆಷ್ಟು, ಟಿಕೆಟ್ ಮಾರಾಟವಾಗಿದ್ದೆಷ್ಟು, ಪ್ರಾಯೋಜಕತ್ವದಲ್ಲಿ ಸಿಕ್ಕ ಮೊತ್ತವೆಷ್ಟು, ಖರ್ಚಾಗಿದ್ದೆಷ್ಟು ಎಂಬ ಮಾಹಿತಿಯನ್ನು ಅಧಿಕಾರಿಗಳು ಬಿಡುಗಡೆ ಮಾಡಿಲ್ಲ. ತಕ್ಷಣ ಮಾಹಿತಿ ನೀಡದಿದ್ದರೆ ಅದು ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ’ ಎಂದಿದ್ದಾರೆ.

ADVERTISEMENT