ADVERTISEMENT

ಧರ್ಮಾಪುರ | ಆಂಜನೇಯ ಸ್ವಾಮಿ ಕೊಂಡೋತ್ಸವ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 3:02 IST
Last Updated 8 ಫೆಬ್ರುವರಿ 2026, 3:02 IST
ಧರ್ಮಾಪುರ ಸಮೀಪದ ರತ್ನಪುರಿಯಲ್ಲಿ ನಡೆದ ಆಂಜನೇಯ ಸ್ವಾಮಿ ಕೊಂಡೋತ್ಸವದಲ್ಲಿ ಅರ್ಚಕರಾದ ರುಕ್ಮಂಗದ ಕೊಂಡ ಹಾಯ್ದರು
ಧರ್ಮಾಪುರ ಸಮೀಪದ ರತ್ನಪುರಿಯಲ್ಲಿ ನಡೆದ ಆಂಜನೇಯ ಸ್ವಾಮಿ ಕೊಂಡೋತ್ಸವದಲ್ಲಿ ಅರ್ಚಕರಾದ ರುಕ್ಮಂಗದ ಕೊಂಡ ಹಾಯ್ದರು   

ಧರ್ಮಾಪುರ: ಸಮೀಪದ ರತ್ನಪುರಿಯಲ್ಲಿ ಶನಿವಾರ ವಿಜೃಂಭಣೆಯಿಂದ ಆಂಜನೇಯ ಸ್ವಾಮಿಯ ಕೊಂಡೋತ್ಸವ ನಡೆಯಿತು.

ಶುಕ್ರವಾರ ರಾತ್ರಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹೋಮ, ಹವನ ವಿಶೇಷ ಪೂಜೆ ಮಾಡಲಾಯಿತು. ನಂತರ ಹದಗೊಳಿಸಿದ ಸೌದೆಗೆ ಕರ್ಪೂರ ಹಚ್ಚುವುದರ ಮೂಲಕ ಕೊಂಡಕ್ಕೆ ಸಿದ್ಧತೆ ನಡೆಸಲಾಯಿತು.

ಬೆಳಿಗ್ಗೆ 7 ಗಂಟೆಗೆ ದೇವಿ ಕೆರೆಯಲ್ಲಿ ಪೂಜಾ ಕಾರ್ಯ ಮುಗಿಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ದೇವಾಲಯದ ಆವರಣದಲ್ಲಿ ಅರ್ಚಕರಾದ ರುಕ್ಮಂಗದ ಅವರು ಕೊಂಡ ಹಾಯ್ದರು.

ADVERTISEMENT

ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು. ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ, ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಯು ಶುಕ್ರವಾರ ರಾತ್ರಿ ಪ್ರಾರಂಭವಾಯಿತು.

ಭಾನುವಾರ ಜಮಲ್ ಬೀಬಿ ಅಮ್ಮನವರ ಗಂಧೋತ್ಸವದಲ್ಲಿ ನಡೆಯಲಿದೆ.

ಗ್ರಾಮದ ಯಜಮಾನರಾದ ರಾಮಚಂದ್ರ, ಸೋಮಣ್ಣ ಶೆಟ್ಟಿ, ಮುಖಂಡರಾದ ವಿಶ್ವನಾಥ್, ಜವರ ನಾಯಕ, ಮನು ಕುಮಾರ್, ವಿಜೇಂದ್ರ, ಸತೀಶ್ ಪಾಪಣ್ಣ, ಸಿದ್ದೇಗೌಡ, ಶಂಕರೇಗೌಡ, ಕೃಷ್ಣಕುಮಾರ್ ಹಾಗೂ ಕೊಂಡೋತ್ಸವದಲ್ಲಿ ಸುತ್ತಮುತ್ತಲ ಗ್ರಾಮದ ಹಳ್ಳದ ಕೊಪ್ಪಲು, ಮಲ್ಲೇಗೌಡನ ಕೊಪ್ಪಲು, ತರಿಕಲ್, ಹುಂಡಿ ಮಾಳ, ಸಿಬಿಟಿ ಕಾಲೊನಿ ಗ್ರಾಮಸ್ಥರು ಭಾಗವಹಿಸಿದ್ದರು.

ಜಮಾಲ್ ಬೀಬಿ ಅಮ್ಮನವರ ಗಂಧೋತ್ಸವದ ಪ್ರಯುಕ್ತ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಮಸೀದಿ

ದಾಸಯ್ಯ ಕುಣಿತ ಆಕರ್ಷಣೆ ಕೊಂಡೋತ್ಸವಕ್ಕೂ ಮುನ್ನ ಧರ್ಮಾಪುರ ಗ್ರಾಮದ ದಾಸಯ್ಯನವರು ದೇವಿ ಕೆರೆಯಿಂದ ಆಂಜನೇಯ ಸ್ವಾಮಿ ದೇವಾಲಯದವರೆಗೂ ಮೆರವಣಿಗೆಯುದ್ದಕ್ಕೂ ಆಕರ್ಷಕ ದಾಸಯ್ಯನವರ ಕುಣಿತ ನಡೆಸಿದರು. ನೋಡಗು ಭಕ್ತರನ್ನು ರೋಮಾಂಚನಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.