ADVERTISEMENT

ಧರ್ಮಾಪುರ: ರತ್ನಪುರಿ ಸರ್ಕಾರಿ ಪ್ರೌಢಶಾಲೆ ರಂಗೋತ್ಸವ, ಗೀತಗಾಯನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 12:29 IST
Last Updated 10 ಮಾರ್ಚ್ 2025, 12:29 IST
ಧರ್ಮಾಪುರ ಸಮೀಪದ ರತ್ನಪುರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ರಂಗೋತ್ಸವ ಹಾಗೂ ಗೀತ ಗಾಯನ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಅಮ್ಮ ರಾಮಚಂದ್ರ ಜಾನಪದ ಗೀತೆಗಳನ್ನು ಹಾಡಿದರು
ಧರ್ಮಾಪುರ ಸಮೀಪದ ರತ್ನಪುರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ರಂಗೋತ್ಸವ ಹಾಗೂ ಗೀತ ಗಾಯನ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಅಮ್ಮ ರಾಮಚಂದ್ರ ಜಾನಪದ ಗೀತೆಗಳನ್ನು ಹಾಡಿದರು   

ಧರ್ಮಾಪುರ: ಸಮೀಪದ ರತ್ನಪುರಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಂಗೋತ್ಸವ ಹಾಗೂ ಗೀತ ಗಾಯನ ಕಾರ್ಯಕ್ರಮವನ್ನು ಬಿಇಒ ಎಸ್ ಪಿ ಮಹದೇವ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಪ್ರತಿಯೊಂದು ಶಾಲೆಯ ಅಭಿವೃದ್ಧಿಗೆ ಶಿಕ್ಷಕರ ಜೊತೆಗೆ ಸ್ಥಳೀಯ ಪೋಷಕರು, ಗ್ರಾಮಸ್ಥರು ಹಾಗೂ ಶಾಲಾ ಅಭಿವೃದ್ಧಿ ಮಂಡಳಿಯ ಸಹಕಾರ ಅತ್ಯಗತ್ಯ. ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯಲು ಅನೇಕ ಸಮಸ್ಯೆಗಳಿದ್ದವು, ಸೌಲಭ್ಯಗಳು ಕಡಿಮೆ ಇದ್ದವು. ಆದರೆ ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನೂ ಒದಗಿಸಲಾಗುತ್ತಿದೆ, ವಿದ್ಯಾರ್ಥಿಗಳು ಅದರ ಸದುಪಯೋಗನ್ನು ಪಡೆದುಕೊಂಡು ಉತ್ತಮ ಫಲಿತಾಂಶ ನೀಡಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಅಮ್ಮ ರಾಮಚಂದ್ರ ವಿದ್ಯಾರ್ಥಿಗಳಿಗೆ ಜಾನಪದ ಸಾಹಿತ್ಯದ ಸೊಗಡನ್ನು ಹಾಡಿನ ಮೂಲಕ ತಿಳಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗಲಾಗದು. ಹರಿದ ಬಟ್ಟೆ, ಹಸಿದ ಹೊಟ್ಟೆ ಸಾಧನೆಗೆ ಸ್ಫೂರ್ತಿ. ಸಾಧನೆಗೆ ಮುನ್ನುಡಿ ಬರೆಯಬೇಕಾದರೆ ಓದುವ ಹಠವಿರಬೇಕು, ಗೆಲ್ಲುವ ಛಲವಿರಬೇಕು ಆಗ ಮಾತ್ರ ನಿಮ್ಮನ್ನು ಯಾರು ಸೋಲಿಸಲಾರರು ಎಂದು ತಿಳಿಸಿದರು.

ADVERTISEMENT

ಉಪ ಪ್ರಾಂಶುಪಾಲ ಮೋಹನ್ ರಾಜ್ ಮಾತನಾಡಿ, ಸ್ಥಳೀಯ ಜನರು, ಹಿರಿಯ ವಿದ್ಯಾರ್ಥಿಗಳ ಸಹಕಾರ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಜನಾರ್ದನ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ರಾವ್ ಮೆಂಗಾಣಿ, ಉಪಾಧ್ಯಕ್ಷೆ ಮಣಿ, ಸದಸ್ಯರಾದ ಶಾಂತಿ ರತ್ನಮ್ಮ, ಜ್ಯೋತಿ, ಮುಜೀಬ್, ವಿಜಯೇಂದ್ರ, ಸಿಆರ್‌ಪಿ ಲೋಕೇಶ್, ಶಿಕ್ಷಕರಾದ ಭಾಗ್ಯ, ಕಿರಣ್ ಕುಮಾರ್, ನಾಗವೇಣಿ, ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.