ಮೈಸೂರು: ಜಿಲ್ಲಾ ಬ್ರಾಹ್ಮಣ ಮಹಾಸಭಾ, ಯುವ ಮಹಾಸಭಾ, ಮಹಿಳಾ ಮಹಸಭಾ, ಪಾರಿಜಾತ ಟ್ರಸ್ಟ್ ಸಹಯೋಗದಲ್ಲಿ ದೇವಯ್ಯನಹುಂಡಿ ಮುಖ್ಯ ರಸ್ತೆಯ ಶಾಕಾಂಬರಿ ಧಾರ್ಮಿಕ ಶ್ರದ್ಧಾ ಕೇಂದ್ರದ ಸಂಧ್ಯಾ ಚೇತನಾ ಸಭಾಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಅವರು ರಾಜ್ಯ ಬ್ರಾಹ್ಮಣ ಮಹಾಸಭಾ ಮೈಸೂರು ವಲಯ ಉಪಾಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್ ಅವರನ್ನು ಸನ್ಮಾನಿಸಿದರು. ಬಳಿಕ ಹತ್ತು ವಿದ್ಯಾರ್ಥಿಗಳಿಗೆ ಗೌರವಧನ, ಯೋಗ ಮ್ಯಾಟ್ ವಿತರಿಸಲಾಯಿತು.
ಬಿ.ಆರ್. ನಟರಾಜ ಜೋಯಿಸ್ ಮಾತನಾಡಿ, ‘ಉನ್ನತ ಅಂಕ ಪಡೆದವರನ್ನು ಎಲ್ಲರೂ ಗುರುತಿಸಿ, ಗೌರವಿಸುತ್ತಾರೆ. ಆದರೆ ಶೇ 60 ರಿಂದ 80 ರಷ್ಟು ಅಂಕ ಪಡೆದವರನ್ನು ಯಾರೂ ಕೇಳುವುದಿಲ್ಲ. ಅವರಲ್ಲೂ ಪ್ರತಿಭಾವಂತರಿರುತ್ತಾರೆ. ಅವರಲ್ಲೂ ಬಡತನದಿಂದ ಬಂದು ಓದಿ, ಅಂಕಗಳನ್ನು ಪಡೆದಿರುತ್ತಾರೆ. ಹೀಗಾಗಿ ಅಂತಹ ಹತ್ತು ಮಂದಿಯನ್ನು ಗುರುತಿಸಿ, ಗೌರವಧನ ನೀಡಲಾಗುತ್ತಿದೆ’ ಎಂದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ, ಡಾ.ರಾಜಶೇಖರ್ ಮೆಡಿಕಲ್ ಫೌಂಡೇಷನ್‌ನ ಡಾ.ಎಚ್.ಬಿ. ರಾಜಶೇಖರ್, ಸಾಹಿತಿಗಳಾದ ಡಾ.ಲತಾ ರಾಜಶೇಖರ್, ಡಾ.ಕೆ. ಲೀಲಾ ಪ್ರಕಾಶ್, ಸಮಾಜ ಸೇವಕರಾದ ಕೆ. ರಘುರಾಂ ವಾಜಪೇಯಿ, ಪುಷ್ಪಾ ಅಯ್ಯಂಗಾರ್, ವೈದೇಹಿ, ಡಾ.ಎಂಜಿಆರ್ ಅರಸ್, ಪಾಲಿಕೆ ಮಾಜಿ ಸದಸ್ಯ ಎಂ. ಪ್ರದೀಪ್ ಕುಮಾರ್, ಕಾಂಗ್ರೆಸ್ ಮುಖಂಡ ವೆಂಕಟಸುಬ್ಬಯ್ಯ, ವಿಕ್ರಾಂತ್ ಪಿ. ದೇವೇಗೌಡ, ಪತ್ರಕರ್ತ ರಂಗನಾಥ್ ಮೈಸೂರು, ಎಸ್. ನಾಗರಾಜು, ಕನ್ನಡ ಹೋರಾಟಗಾರ ಅರವಿಂದ ಶರ್ಮ, ಸಮಾಜ ಸೇವಕರಾದ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಅರಿವು ಸಂಸ್ಥೆಯ ಕಶ್ಯಪ್, ಜಿ.ಆರ್. ವಿದ್ಯಾರಣ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.