ADVERTISEMENT

'ನಶೆ ಮುಕ್ತ ಮೈಸೂರು' ನಿರ್ಮಾಣಕ್ಕಾಗಿ 12ರಂದು ಧರಣಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 12:16 IST
Last Updated 10 ಜನವರಿ 2026, 12:16 IST
   

ಮೈಸೂರು: ‘ನಶೆ ಮುಕ್ತ ಮೈಸೂರು ನಿರ್ಮಾಣಕ್ಕಾಗಿ ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಜ.12ರಂದು ಬೆಳಿಗ್ಗೆ 10ಕ್ಕೆ ಇಲ್ಲಿನ ಅಗ್ರಹಾರ ವೃತ್ತದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ’ ಎಂದು ಕನ್ನಡಪರ ಹೋರಾಟಗಾರ ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದರು.

‘ಮಾದಕ ದ್ರವ್ಯಗಳು ಬೇಡ, ನಶೆ ಮುಕ್ತ ಮೈಸೂರು ಅಭಿಯಾನದ ಭಾಗವಾಗಿ ಧರಣಿ ನಡೆಸಲಾಗುತ್ತಿದೆ. ವಿವಿಧ ಸಂಘ–ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಿವೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸರ್ಕಾರಗಳು ಮಾದಕ ವಸ್ತು ಮಾರಾಟಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು ಎಂಬ ಹಕ್ಕೊತ್ತಾಯ ಮಂಡಿಸಲಾಗುವುದು. ವ್ಯಸನಮುಕ್ತ ಜೀವನ ನಡೆಸಲು ಯುವಜನರನ್ನು ಪ್ರೇರೇಪಿಸುವ ಗುರಿಯನ್ನು ಅಭಿಯಾನದ ಮೂಲಕ ಹೊಂದಲಾಗಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.