ADVERTISEMENT

ಯುವಜನರಲ್ಲಿ ಹೆಚ್ಚಿದ ಮಾದಕ ವಸ್ತು ಬಳಕೆ: ಕಳವಳ

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಮಾದಕ ವಸ್ತು ಕಾನೂನು ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 5:08 IST
Last Updated 14 ಫೆಬ್ರುವರಿ 2026, 5:08 IST
ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ನಡೆದ ಮಾದಕ ವಸ್ತು ದುರ್ಬಳಕೆ ಜಾಗೃತಿ ಕಾರ್ಯಕ್ರಮವನ್ನು ಸಿಪಿಐ ಬಿ.ಎಸ್.ರವಿಶಂಕರ್ ಉದ್ಘಾಟಿಸಿದರು
ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ನಡೆದ ಮಾದಕ ವಸ್ತು ದುರ್ಬಳಕೆ ಜಾಗೃತಿ ಕಾರ್ಯಕ್ರಮವನ್ನು ಸಿಪಿಐ ಬಿ.ಎಸ್.ರವಿಶಂಕರ್ ಉದ್ಘಾಟಿಸಿದರು   

ಮೈಸೂರು: ‘ಯುವಜನರಲ್ಲಿ ಮಾದಕ ವಸ್ತು ಬಳಕೆ ಹೆಚ್ಚಿದೆ. ಇದು ವ್ಯಕ್ತಿಯ ಜೊತೆಗೆ ಸಮಾಜದ ಮೇಲೆಯೂ ಪರಿಣಾಮ ಬೀರುತ್ತದೆ’ ಎಂದು ಲಕ್ಷ್ಮೀಪುರಂ ಠಾಣೆಯ ಸಿಪಿಐ ಬಿ.ಎಸ್.ರವಿಶಂಕರ್ ಹೇಳಿದರು.

ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿ ಕ್ಷೇಮಪಾಲನೆ ಘಟಕ, ವಿದ್ಯಾರ್ಥಿ ಕುಂದುಕೊರತೆ ಸಮಿತಿ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಆಶ್ರಯದಲ್ಲಿ ಆಯೋಜಿಸಿದ್ದ ಮಾದಕ ವಸ್ತು ದುರ್ಬಳಕೆ ಜಾಗೃತಿ ಹಾಗೂ ಕಾನೂನು ಸಹಾಯ ಮತ್ತು ದೂರು ಸಲ್ಲಿಕೆ ವ್ಯವಸ್ಥೆ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಮಾದಕ ವಸ್ತು ಬಳಕೆ ಆರೋಗ್ಯ, ವಿದ್ಯಾಭ್ಯಾಸ ಹಾಗೂ ಕುಟುಂಬ ಜೀವನದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ. ಮಾದಕ ವಸ್ತುಗಳ ಸಾಗಣೆ ಹಾಗೂ ಬಳಕೆ ಕಾನೂನುಬಾಹಿರ. ಇದಕ್ಕೆ ಕಠಿಣ ಶಿಕ್ಷೆಗಳು ವಿಧಿಸಲಾಗುತ್ತವೆ’ ಎಂದು ತಿಳಿಸಿದರು.

ADVERTISEMENT

ಪ್ರಾಂಶುಪಾಲ ಎಂ.ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಿಪುರಂ ಠಾಣೆ ಸಬ್ ಇನ್‌ಸ್ಪೆಕ್ಟರ್ ಶೇಕ್ ಫಿರೋಜ್, ವಿದ್ಯಾರ್ಥಿ ಕುಂದುಕೊರತೆ ಸಮಿತಿ ಸಂಚಾಲಾಕಿ ಅಭಿನಂದಿನಿ ಐ.ಡಿ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕರ ನಂದಕುಮಾರ್ ವಿ., ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್, ವಿದ್ಯಾರ್ಥಿ ಕ್ಷೇಮಪಾಲನೆ ಸಮಿತಿ ಸಂಚಾಲಕಿ ಪ್ರೀತಿ ಎನ್.ತಲ್ಲೂರ್, ವಿದ್ಯಾ ಕೆ, ಲಕ್ಷ್ಮೀ ಎಂ.ಪಳೋಟಿ, ಅಂತಿಮ ಬಿ.ಎಸ್‌ಸಿ ವಿದ್ಯಾರ್ಥಿ ವರ್ಷಿಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.