ಮೈಸೂರಿನ ಗನ್ ಹೌಸ್ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು 'ಡ್ರಗ್ಸ್ ಜಾಲ ನಿರ್ಮೂಲನೆ ಮಾಡಲು ಸರ್ಕಾರ ಕ್ರಮವಹಿಸಬೇಕು' ಎಂದು ಒತ್ತಾಯಿಸಿ ಮಂಗಳವಾರ ಪ್ರತಿಭಟಿಸಿದರು. ಸಂಘಟನೆ ಪದಾಧಿಕಾರಿಗಳಾದ ಎಚ್.ಕೆ.ಪ್ರವೀಣ್, ಎಚ್.ಬಿ.ಪ್ರಜ್ವಲ್, ಗುರು ಪ್ರಸಾದ್, ಶ್ರೀ ದತ್ತ್, ಮಧುರಾ, ಸಂಜಿತ್ ಭಾಗವಹಿಸಿದರು. ಪ್ರಜಾವಾಣಿ ಚಿತ್ರ.
ಮೈಸೂರು: ನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಕಾರ್ಯಕರ್ತರು ಡ್ರಗ್ಸ್ ವಿರುದ್ಧ ಮಂಗಳವಾರ ಗನ್ ಹೌಸ್ ವೃತ್ತದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಅವಕಾಶ ನೀಡದ ಪೊಲೀಸರ ಕ್ರಮವನ್ನು ಖಂಡಿಸಿ ಪ್ರತಿಭಟಿಸಿದರು.
ಸಂಘಟನೆಯು ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಮಂಗಳೂರು, ಪುತ್ತೂರು, ಮಡಿಕೇರಿ, ಹಾಸನ ಭಾಗದ ಕಾರ್ಯಕರ್ತರೂ ಆಗಮಿಸಿದ್ದರು. ಜಾಥಾಕ್ಕರ ಅವಕಾಶ ಸಿಗದಿದ್ದಾಗ ಗನ್ ಹೌಸ್ ವೃತ್ತದ ಬಸವಣ್ಣ ಪ್ರತಿಮೆ ಬಳಿ ರಸ್ತೆಯಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ್ದರು.
ಪ್ರತಿಭಟನಾಕಾರರು ಮಾತನಾಡುತ್ತಿದ್ದ ಸಮಯದಲ್ಲಿ ಮತ್ತೊಂದು ರಸ್ತೆಯಿಂದಾಗಿ ಬಂದ ಎಬಿವಿಪಿ ಕಾರ್ಯಕರ್ತರ ಗುಂಪು ಜಾಥಾ ನಡೆಸಲು ಮುಂದಾಯಿತು. ಪೊಲೀಸರು ತಡೆದಾಗ ಮಾತಿನ ಚಕಮಕಿ ನಡೆಯಿತು. ಪೊಲೀಸರ ಕ್ರಮವನ್ನು ಖಂಡಿಸಿ, ಗೃಹಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.