
ಮೈಸೂರು: ನಗರದ ಮೈಸೂರು ಕನ್ನಡ ವೇದಿಕೆಯಿಂದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಡಿ.ವಿ.ಗುಂಡಪ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ‘ಕನ್ನಡ ಭಾಷೆ ಕೇವಲ ಸಾಹಿತಿಗಳು ಹಾಗೂ ಸಾಹಿತ್ಯದಿಂದ ಮಾತ್ರವೇ ಉಳಿದಿಲ್ಲ. ಕನ್ನಡ ಹೋರಾಟಗಾರರೂ ಪ್ರಮುಖ ಪಾತ್ರ ವಹಿಸಿದ್ದಾರೆ. ಅಂತಹ ಸಾಧನೆ ಮಾಡಿದವರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ’ ಎಂದರು.
ಮಾಧ್ಯಮ ಕ್ಷೇತ್ರದ ಅಂಶಿ ಪ್ರಸನ್ನಕುಮಾರ್, ಎಂ.ಟಿ.ಯೋಗೇಶ್‌ಕುಮಾರ್, ಎಚ್.ಎಸ್.ದಿನೇಶ್‌ಕುಮಾರ್, ಹಂಪಾ ನಾಗರಾಜ, ಸಮಾಜ ಸೇವೆಯಲ್ಲಿ ಎಚ್.ಆರ್. ದೀಪಾ, ಪೌರಕಾರ್ಮಿಕರಾದ ಸವಿತಾ, ಹೋರಾಟಗಾರರಾದ ಕೆ. ಮಾದಪ್ಪ, ಡೈರಿ ವೆಂಕಟೇಶ್, ರೈತ ಹೋರಾಟಗಾರರಾದ ಪಿ. ಮರಂಕಯ್ಯ, ಸಾಯಿ ಚಾಮರಾಜು ಮಂಡಕಳ್ಳಿ ಅವರನ್ನು ಗಣ್ಯರು ಸನ್ಮಾನಿಸಿದರು.
ಎಸ್.ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹೊಯ್ಸಳ, ಮನೋಹರ್, ನಾಲಾಬೀದಿ ರವಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.