ಈದ್ ಮಿಲಾದ್ ಪ್ರಯುಕ್ತ ಹುಣಸೂರು ನಗರದ ಶಬ್ಬೀರ್ ನಗರದಿಂದ ಮುಸ್ಲಿಂ ಸಮುದಾಯದವರು ಶುಕ್ರವಾರ ಬೃಹತ್ ಮೆರವಣಿಗೆಯಲ್ಲಿ ನ ಈದ್ಗ ಮೈದಾನಕ್ಕೆ ತೆರಳಿದರು.
ಹುಣಸೂರು: ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ಬೃಹತ್ ಮೆರವಣಿಗೆ ಮೂಲಕ ಈದ್ಗ ಮೈದಾನಕ್ಕೆ ತೆರಳಿದರು.
ನಗರದ ಶಬ್ಬೀರ್ ನಗರದಿಂದ ಆರಂಭವಾದ ಮೆರವಣಿಗೆ ಕಾರ್ಖಾನೆ ರಸ್ತೆ, ಜೆ.ಎಲ್.ಬಿ ರಸ್ತೆ ಮತ್ತು ಎಸ್.ಜೆ.ರಸ್ತೆ ಮೂಲಕ ಸಂವಿಧಾನ ವೃತ್ತದಿಂದ ಈದ್ಗ ಮೈದಾನಕ್ಕೆ ಹಸಿರು ಬಾವುಟದೊಂದಿಗೆ ತೆರಳಿದರು. ಮದರಸ ಶಾಲೆಯ ವಿದ್ಯಾರ್ಥಿಗಳು ಖುರಾನ್ ಪಠಣ, ಜಿಂದಾಬಾದ್ ಎಂಬ ಘೋಷಣೆಯೊಂದಿಗೆ ತೆರಳಿದರು.
ಸಮುದಾಯದ ಮುಖಂಡ ಮಸೀದಿ ಅಧ್ಯಕ್ಷ ಫಜಲುಲ್ಲಾ ‘ಪ್ರಜಾವಾಣಿ’ಗೆ ಮಾತನಾಡಿ, ಪ್ರವಾದಿ ಮುಹಮ್ಮದ್ ಪೈಗಂಬರರ ಸಾವಿರದ ಐನೂರನೇ ಜನ್ಮದಿನಾಚರಣೆಯಾಗಿದ್ದು, ಶಿಕ್ಷಕರ ದಿನಾಚರಣೆಯಂದೇ ಬಂದಿದೆ. ಧರ್ಮಗುರುಗಳು ಧರ್ಮದಲ್ಲಿ ತತ್ವ ಆದರ್ಶ ತಿಳಿಸುವ ಮೂಲಕ ಧಾರ್ಮಿಕ ಶಿಕ್ಷಕರಾಗಿದ್ದಾರೆ ಎಂದರು.
ಇಲ್ಲಿಯ ಈದ್ಗ ಮೈದಾನದಲ್ಲಿ ಪ್ರಮುಖ ಮಸೀದಿಗಳ ಧರ್ಮಗುರುಗಳು ಧಾರ್ಮಿಕ ಪ್ರವಚನವನ್ನು ರಾತ್ರಿ 10 ಗಂಟೆವರೆಗೆ ನೀಡಲಿದ್ದು, ಈ ಧಾರ್ಮಿಕ ಪ್ರವಚನದ ಬಳಿಕ 15 ಸಾವಿರ ಮಂದಿಗೆ ಸಸ್ಯಾಹಾರ ಭೋಜನ ಹಮ್ಮಿಕೊಂಡಿದ್ದು, ಹಿಂದೂ, ಮುಸ್ಲಿಂ ಸಮುದಾಯಗಳವು ಪಾಲ್ಗೊಳ್ಳುವರು ಎಂದರು. ಸಮುದಾಯದ ಮುಖಂಡ ಹಜರತ್ ಜಾನ್ , ನಗರಸಭೆ ಅಧ್ಯಕ್ಷ ಮಲ್ಲಿಕ್ ಪಾಶಾ, ಅಫ್ರೋಜ್, ಮಜಾಜ್ ಅಹಮದ್, ಯುನಿಸ್, ಅಂಡಿ, ಶಾ ಆಲಂ, ಖಾಯಾಮುದ್ದಿನ್, ಮುಮ್ಮಜಾಜ್, ಶಿಂಶು, ಜಾಕಿರ್, ಶಿರಾಜ್, ಅಜ್ಗರ್ ಪಾಶಾ, ಯುನಿಸ್ ಭಾಗವಹಿಸಿದ್ದರು. ಬಂದೋಬಸ್ತ್ ನೇತೃತ್ವ ವಹಿಸಿದ್ದ ಡಿವೈಎಸ್ಪಿ ಗೋಪಾಲ ಕೃಷ್ಣ ಮಾತನಾಡಿ, ಈದ್ ಮಿಲಾದ್ ಹಬ್ಬದ ಅಂಗವಾಗಿ ಹಮ್ಮಿಕೊಂಡಿರುವ ಮೆರವಣಿಗೆಯಲ್ಲಿ 6 ರಿಂದ 7 ಸಾವಿರ ಜನರು ಭಾಗವಹಿಸಿದ್ದರು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.