ADVERTISEMENT

ಮೈಸೂರು ಅರಮನೆ: ವಿವಿಧ ದ್ವಾರಗಳಿಂದ ದೇಗುಲಗಳಿಗೆ ಪ್ರವೇಶ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 13:56 IST
Last Updated 10 ಫೆಬ್ರುವರಿ 2023, 13:56 IST
   

ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆ ಆವರಣದಲ್ಲಿರುವ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಬೆಳಿಗ್ಗೆ 6.30ರಿಂದ 10ರವರೆಗೆ ಮತ್ತು ಸಂಜೆ 6ರಿಂದ ರಾತ್ರಿ 8.30ರವರೆಗೆ ದರ್ಶನಕ್ಕೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ವಿವಿಧ ದಿಕ್ಕುಗಳಲ್ಲಿರುವ ದೇಗುಲಗಳಿಗೆ ಆಯಾ ದ್ವಾರಗಳ ಮೂಲಕ ಜನರು ಹೋಗಬಹುದಾಗಿದೆ. ಪ್ರವೇಶ ದ್ವಾರದ ಸಮೀಪದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ.

ಈ ಹಿಂದೆ, ದೇವಸ್ಥಾನಗಳಿಗೆ ಬರುವವರು ಮಹಾನಗರಪಾಲಿಕೆ ಎದುರಿನ ದ್ವಾರದಿಂದ ಪ್ರವೇಶಿಸಬೇಕಿತ್ತು. ಇಟ್ಟಿಗೆಗೂಡು ಕಡೆಯಿಂದ ಬರುವವರು ಸುತ್ತಿ ಬಳಸಿಕೊಂಡಿ ಪಾಲಿಕೆ ಎದುರಿನ ದ್ವಾರದಲ್ಲೇ ಹೋಗಬೇಕಿತ್ತು. ಈಗ, ಹೊಸ ವ್ಯವಸ್ಥೆಯ ಮೂಲಕ ಪ್ರವಾಸಿಗರು ಅಥವಾ ಸಾರ್ವಜನಿಕರು ನೇರವಾಗಿ ಪ್ರವೇಶ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಭದ್ರತಾ ತಪಾಸಣೆಗೆ ಒಳಪಟ್ಟು ಪ್ರವೇಶಿಸಬಹುದಾಗಿದೆ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ತಿಳಿಸಿದರು.

‘ಇದರಿಂದ ನಮ್ಮ ಕಾರ್ಯಕ್ರಮಗಳಿಗೆ ತೊಂದರೆಯಾಗುವುದಿಲ್ಲ. ಭಕ್ತರು ಯಾವ ದೇವಸ್ಥಾನಕ್ಕೆ ಹೋಗಬೇಕೋ ಅಲ್ಲಿಗೆ ನೇರವಾಗಿ ತೆರಳಬಹುದಾಗಿದೆ. ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಅಡ್ಡಿಯಾಗುವುದಿಲ್ಲ. ಹಿಂದಿನಿಂದಲೂ ದೇಗುಲಗಳಿಗೆ ಪ್ರವೇಶವಿದೆ. ಈಗ, ವ್ಯವಸ್ಥಿತಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ದೇವಸ್ಥಾನದ ಹೆಸರು; ಪ್ರವೇಶಿಸುವ ದ್ವಾರ; ವಾಹನ ನಿಲ್ದಾಣ ಸ್ಥಳ
ಪ್ರಸನ್ನಕೃಷ್ಣಸ್ವಾಮಿ, ಖಿಲ್ಲೆ ವೆಂಕಟರಮಣ, ಲಕ್ಷ್ಮಿರಮಣಸ್ವಾಮಿ; ಕರಿಕಲ್ಲು ತೊಟ್ಟಿ;ಕರಿಕಲ್ಲು ತೊಟ್ಟಿ ದ್ವಾರದ ಎಡಗಡೆಯ ಜಾಗ
ಶ್ವೇತವರಾಹಸ್ವಾಮಿ; ವರಾಹ; ವರಾಹ ದ್ವಾರದ ಬಳಿಯ ಜಾಗ
ಗಾಯತ್ರಿದೇವಿ, ತ್ರಿನಯನೇಶ್ವರ, ಕೋಡಿ ಸೋಮೇಶ್ವರ, ಕೋಡಿ ಕಾಲಭೈರವೇಶ್ವರ;ಜಯಮಾರ್ತಾಂಡ;ದೊಡ್ಡಕೆರೆ ಮೈದಾನ
ಭುವನೇಶ್ವರಿ; ಜಯರಾಮ–ಬಲರಾಮ; ಕೋಟೆ ಆಂಜನೇಯ ದೇಗುಲ ಬಳಿ

ಹಿರಿಯ ನಾಗರಿಕರು, ವಿಶೇಷ ವ್ಯಕ್ತಿಗಳು ಹಾಗೂ ಅನಾರೋಗ್ಯಪೀಡಿತರು ಭದ್ರತಾ ತಪಾಸಣೆಗೆ ಒಳಗಾಗಿ ದೇವಸ್ಥಾನಕ್ಕೆ ವಾಹನಗಳಲ್ಲಿ ಪ್ರವೇಶಿಸಬಹುದು

ದೇವಸ್ಥಾನದ ಹೆಸರು; ಪ್ರವೇಶಿಸುವ ದ್ವಾರ
ಪ್ರಸನ್ನಕೃಷ್ಣ ಸ್ವಾಮಿ, ಖಿಲ್ಲೆ ವೆಂಕಟರಮಣಸ್ವಾಮಿ, ಲಕ್ಷ್ಮಿರಮಣಸ್ವಾಮಿ;ಕರಿಕಲ್ಲು ತೊಟ್ಟಿ
ಶ್ವೇತವರಾಹಸ್ವಾಮಿ; ವರಾಹ ದ್ವಾರ
ಗಾಯತ್ರಿದೇವಿ, ತ್ರಿನಯನೇಶ್ವರ, ಕೋಡಿ ಸೋಮೇಶ್ವರ, ಕೋಡಿ ಕಾಲಭೈರವೇಶ್ವರ, ಭುವನೇಶ್ವರಿ;ಕರಿಕಲ್ಲು ತೊಟ್ಟಿ ದ್ವಾರದಲ್ಲಿ ಪ್ರವೇಶಿಸಿ ಲಕ್ಷ್ಮಿರಮಣಸ್ವಾಮಿ ದೇವಸ್ಥಾನದ ಎಡಭಾಗದಲ್ಲಿರುವ ಮಾರ್ಗದ ಮೂಲಕ ಪ್ರವೇಶಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.