ADVERTISEMENT

ಚಿತ್ರರಂಗಕ್ಕೆ ಬರಹಗಾರರ ಅಗತ್ಯವಿದೆ: ನಿರ್ದೇಶಕ ಎಸ್‌.ಎಂ.ಜೋ ಸೈಮನ್‌

ಚಿತ್ರಕಥಾ ರಚನಾ ತರಬೇತಿ ಕಾರ್ಯಾಗಾರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:40 IST
Last Updated 8 ನವೆಂಬರ್ 2025, 4:40 IST
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಪ್ರಾಯೋಗಿಕ ಚಿತ್ರಕಥಾ ರಚನಾ ತರಬೇತಿ ಕಾರ್ಯಾಗಾರದಲ್ಲಿ ನಿರ್ದೇಶಕ ಎಸ್.ಎಂ. ಜೋ ಸೈಮನ್ ಮಾತನಾಡಿದರು ಪ್ರಜಾವಾಣಿ ಚಿತ್ರ
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಪ್ರಾಯೋಗಿಕ ಚಿತ್ರಕಥಾ ರಚನಾ ತರಬೇತಿ ಕಾರ್ಯಾಗಾರದಲ್ಲಿ ನಿರ್ದೇಶಕ ಎಸ್.ಎಂ. ಜೋ ಸೈಮನ್ ಮಾತನಾಡಿದರು ಪ್ರಜಾವಾಣಿ ಚಿತ್ರ   

ಮೈಸೂರು: ‘ವಸ್ತು ವಿಷಯದಲ್ಲಿ ಪರಿಪೂರ್ಣತೆ ಇಲ್ಲದಿದ್ದರೆ ಕೋಟಿಗಟ್ಟಲೇ ಹಣ ಸುರಿದರೂ ಸಿನಿಮಾ ಗೆಲ್ಲುವುದಿಲ್ಲ. ಹೀಗಾಗಿ ಚಿತ್ರರಂಗಕ್ಕೆ ಪರಿಣಾಮಕಾರಿ ಬರಹಗಾರರ ಅಗತ್ಯವಿದೆ’ ಎಂದು ಚಲನಚಿತ್ರ ನಿರ್ದೇಶಕ ಎಸ್‌.ಎಂ.ಜೋ ಸೈಮನ್‌ ತಿಳಿಸಿದರು.

ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಶುಕ್ರವಾರ ಆಯೋಜಿಸಿದ್ದ ‘ಪ್ರಾಯೋಗಿಕ ಚಿತ್ರಕಥಾ ರಚನಾ ತರಬೇತಿ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡಿದರು.

‘ಸಿನಿಮಾ ಒಂದು ಭಾಷೆ. ಅದಕ್ಕೆ ವ್ಯಾಕರಣ ಮುಖ್ಯ. ಬರವಣಿಗೆಗಾಗಿ ನಾವು ಆರಿಸುವ ವಸ್ತು ಸಿನಿಮಾ ಬೆಳೆಯಲು ಸಹಕರಿಸುತ್ತದೆ. ಒಂದು ವಸ್ತುವಿನಿಂದ ಪ್ರಾರಂಭಗೊಂಡು ಅದು ಚಲಿಸುತ್ತಾ ಕೊನೆಗೊಂಡು ಪರಿಪೂರ್ಣತೆಯನ್ನು ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಕಥೆ ಎನ್ನುತ್ತಾರೆ. ಹೀಗಾಗಿ ಕಥೆಗೆ ಚಲನೆಯಿದೆ ಎಂಬ ಮಾತು ಒಪ್ಪಿಕೊಳ್ಳಬೇಕು’ ಎಂದರು.

ADVERTISEMENT

‘ಬರಹಗಾರ ಬರವಣಿಗೆಯ ಸಮಯದಲ್ಲಿ ದೃಶ್ಯದ ಕಲ್ಪನೆ ಇಟ್ಟುಕೊಂಡಾಗ ನಮ್ಮ ಕಥೆ ಜೀವಂತವಾಗಿ ಉಳಿಯುತ್ತದೆ. ಪಾತ್ರಗಳನ್ನು ಅನುಭವಿಸುತ್ತಾ ಬರೆಯಬೇಕು. ಇಲ್ಲದಿದ್ದರೆ ಅದರಲ್ಲಿ ಸತ್ವ ಇರುವುದಿಲ್ಲ’ ಎಂದು ನುಡಿದರು.

ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್‌.ಕೆ.ಲೋಲಾಕ್ಷಿ ಮಾತನಾಡಿ, ‘ಯುವ ಸಮೂಹಕ್ಕೆ ಬಹಳಷ್ಟು ಉದ್ಯೋಗ ಅವಕಾಶಗಳಿವೆ. ಅವರಿಗೆ ಅಗತ್ಯವಿರುವ ತರಬೇತಿ ನೀಡಿದರೆ, ಸಿನಿಮಾ ಮಾಧ್ಯಮದಲ್ಲಿ ವಿಶೇಷ ಸಾಧನೆ ಮಾಡುವ ಚಾಕಚಕ್ಯತೆ ನಮ್ಮ ವಿದ್ಯಾರ್ಥಿಗಳಲ್ಲಿದೆ. ಚಿತ್ರರಂಗದ ಬೆಳವಣಿಗೆಗೆ ಹೊಸ ಕಥನಕಾರರು ಸೃಷ್ಟಿಯಾಗಬೇಕಿದೆ’ ಎಂದು ಹೇಳಿದರು.

‘ನಾಯಕ ನಟನಾಗಲು ಸೌಂದರ್ಯವಷ್ಟೇ ಮಾನದಂಡವಲ್ಲ ಎಂಬ ವಿಚಾರವನ್ನು ಚಿತ್ರರಂಗ ಪ್ರಸ್ತುತಪಡಿಸಿದೆ. ನಮ್ಮೆಲ್ಲರ ಹೃದಯದಲ್ಲೂ ಅನೇಕ ಕಥೆ, ಪದಗಳಿವೆ. ಅವನ್ನು ಹೇಗೆ ಚಿತ್ರಕಥೆಯಾಗಿ ಪರಿವರ್ತಿಸಬಹುದು ಎಂಬುದನ್ನು ಕಲಿಯಬೇಕಿದೆ. ಈ ತರಬೇತಿಯಿಂದ ಮಕ್ಕಳು ತಮ್ಮ ಜೀವನ ಕಟ್ಟಿಕೊಳ್ಳುತ್ತಾರೆ’ ಎಂದು ಹೇಳಿದರು.

ಬರಹಗಾರ ವೈ.ಒ.ರುದ್ರೇಶ್‌, ಕಾರ್ಯನಿರ್ವಾಹಕ ನಿರ್ದೇಶಕ ಎಸ್‌.ಮಹೇಶ್‌ ಭಾಗವಹಿಸಿದ್ದರು.ನಮ್ಮ ಜೀವನದಲ್ಲಿ ಅನೇಕ ಕಥೆಗಳಿವೆ. ಅವುಗಳನ್ನು ಚಿತ್ರಕಥೆಗಳಾಗಿ ಪರಿವರ್ತಿಸುವ ಕೌಶಲ ನಮ್ಮಲ್ಲಿರಬೇಕು ಪ್ರೊ.ಎನ್.ಕೆ. ಲೋಲಾಕ್ಷಿ ನಿರ್ದೇಶಕರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ

ನಮ್ಮ ಜೀವನದಲ್ಲಿ ಅನೇಕ ಕಥೆಗಳಿವೆ. ಅವುಗಳನ್ನು ಚಿತ್ರಕಥೆಗಳಾಗಿ ಪರಿವರ್ತಿಸುವ ಕೌಶಲ ನಮ್ಮಲ್ಲಿರಬೇಕು
ಪ್ರೊ.ಎನ್.ಕೆ. ಲೋಲಾಕ್ಷಿ ನಿರ್ದೇಶಕರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.